Publicstory/prajayoga
ತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಗೈರಾಗುವ ಮೂಲಕ ಕರ್ತವ್ಯ ಲೋಪವೆಸಗಿದ್ದರು.
ಪಿಡಿಒ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರು ಹಾಗೂ ಗ್ರಾಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಶಿಸ್ತು ಕ್ರಮ ಕೈಗೊಳ್ಳುವಂತೆ ಸಿಇಒ ಅವರನ್ನು ಒತ್ತಾಯಿಸಿದ್ದರು.
ಸಾರ್ವಜನಿಕ ದೂರು ಹಾಗೂ ಇಒ ಸತೀಶ್ ಕುಮಾರ್ ಅವರ ವರದಿಯ ಮೇಲೆ ಪಿಡಿಒ ಲಿಂಗರಾಜೇಗೌಡ ರನ್ನು ತಕ್ಷಣ ಜಾರಿಗೆ ಬರುವಂತೆ ಸಿಇಒ ವಿದ್ಯಾಕುಮಾರಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.