Publicstory/prajayoga
ತಿಪಟೂರು: ಬಿಎಸ್ ಯಡಿಯೂರಪ್ಪನವರನ್ನು ಕೆಲಸಕ್ಕೆ ಬಂದಾಗ ಉಪಯೋಗಿಸಿಕೊಳ್ಳಬಾರದು. ಚುನಾವಣೆ ವ್ಯವಸ್ಥೆ ಹತ್ತಿರ ಬಂದಾಗ ಅಧಿಕಾರ ಕೊಡುವುದು, ಚುನಾವಣೆ ನಂತರ ಅಧಿಕಾರ ಕಿತ್ತುಕೊಳ್ಳುವುದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ನಾಯಕರಿಗೆ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪಟ್ಟಣದ ವಿರಕ್ತ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪನವರನ್ನು ಭಾಜಪ ಪಕ್ಷದ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿರುವಂತಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯಾವುದೇ ಹಗರಣ ನಡೆಸದ ಬೊಮ್ಮಾಯಿ ಸರ್ಕಾರ
ಒಂದು ವರ್ಷ ಪೂರ್ಣಗೊಂಡಿರುವ ಬೊಮ್ಮಾಯಿ ನೇತೃತ್ವ ಸರ್ಕಾರವು ಯಾವುದೇ ಹಗರಣಗಳನ್ನು ನಡೆಸದೆ ಜನ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಲಿಂಗಾಯತ ಸಮಾಜದ ಮುಖ್ಯಮಂತ್ರಿ ಆಗಿರುವ ಅವರು ಅಧಿಕಾರ ಒಂದು ವರ್ಷ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಕೆಲ ರಾಜಕಾರಣಿಗಳು ರಾಜಕೀಯ ಮಾಡಲು ರಾಜೀನಾಮೆ ವದಂತಿ ಮತ್ತು ಮುಖ್ಯಮಂತ್ರಿ ಬದಲಾವಣೆ ಎಂಬ ಸುಳ್ಳು ಮಾಹಿತಿಯನ್ನು ಹರಿದಾಡಿಸುತ್ತಿದ್ದಾರೆ. ಈ ಅಂಶವು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.
ರಾಜ್ಯದ ಹಿಂದುಳಿದ ಮಠಗಳಿಗೆ ಅಭಿವೃದ್ಧಿಯನ್ನು ಕಾಣುವಂತೆ ಮಾಡಲು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಉನ್ನತಿಕರಣ ಹೊಂದಲು ಸರ್ಕಾರವು ಅನುದಾನ ನೀಡಿದೆ ಎಂದರು.
ಈ ವೇಳೆ ವಿರುಕ್ತಮಠ ಮಾಡಾಳು. ಶಶಿ ಶೇಖರ ಸಿದ್ದ ಬಸವ ಸ್ವಾಮಿಜಿ ದೊಡ್ಡ ಮೇಟಿಕುರ್ಕೆ, ಕಾರದೇಶ್ವರ ಸ್ವಾಮಿಜಿಯವರು ಬೆಳ್ಳಾವಿ, ಪ್ರಭು ಕುಮಾರ ಸ್ವಾಮೀಜಿ ಬಿದರೆ, ರಾಜೋಟೇಶ್ವರ ಸ್ವಾಮೀಜಿ ಬೀಳಗಿ , ರೇವಣಸಿದ್ದೇಶ್ವರ ಮಹಾ ಸ್ವಾಮೀಜಿ ದೊಡ್ಡಗುಣಿ, ಮಾದಿಹಳ್ಳಿ ಸ್ವಾಮೀಜಿ ಹಾಜರಿದ್ದರು.