Wednesday, September 18, 2024
Google search engine
Homeಲೇಖನಕರ್ನಾಟಕದ ಮುಳುಗದ ಸೂರ್ಯ ದೇವರಾಜ ಅರಸು

ಕರ್ನಾಟಕದ ಮುಳುಗದ ಸೂರ್ಯ ದೇವರಾಜ ಅರಸು

Publicstory/prajayoga

ಸಿದ್ದು ಬಿ.ಎಸ್ ಸೂರನಹಳ್ಳಿ, ತಿಪಟೂರು

ದೇವರಾಜು ಅರಸುರವರ ರಾಜ್ಯ ಕಂಡ ಅಪರೂಪದ ರಾಜಕೀಯ ಮುತ್ಸದಿ. ಅವರ ಆಡಳಿತ ದಕ್ಷತೆ, ಶುದ್ಧತೆ, ಶುಚಿತ್ವ ಮತ್ತು ಪ್ರಾಮಾಣಿಕತೆಯಿಂದ ಕೂಡಿತ್ತು.
ಅಧಿಕಾರ ವಂಚಿತ ಸಮುದಾಯಕ್ಕೆ ಅಧಿಕಾರವನ್ನು ಅನುಭವಿಸುವ ಅಧಿಕಾರವನ್ನು ಕಲ್ಪಿಸಿಕೊಟ್ಟವರು. ಸಾಮಾಜಿಕ ಪರಿವರ್ತನೆಗೆ ಅರಸು ಕಾರಣಕರ್ತರಾದರು. ಅವರ ಚಿಂತನೆಗಳು, ಕಾರ್ಯಕ್ರಮಗಳು, ಆಡಳಿತಾತ್ಮಕ ನಿರ್ಧಾರಗಳು ಮುಂದಿನ ಜನಾಂಗಕ್ಕೂ ಮತ್ತು ಸರ್ಕಾರಕ್ಕೂ ದಿಕ್ಸೂಚಿಯಾಗಿದೆ.

ಬಸವಣ್ಣರವರ ತತ್ವಗಳನ್ನು ಜಾರಿಗೆ ತಂದ ನಿಜವಾದ ನಾಯಕ ದೇವರಾಜ ಅರಸು. ಇಡೀ ಮಂತ್ರಿಮಂಡಲದ ಅನುಭವ ಮಂಟಪದಂತಿತ್ತು. ಆನಂತರ ಕಂಡಿದ್ದು ಸಿದ್ದರಾಮಯ್ಯನವರ ಮಂತ್ರಿಮಂಡಲದಲ್ಲಿ  ಮಾತ್ರ. ನಿಜವಾದ ಪ್ರಜಾಪ್ರಭುತ್ವ ಜನರಿಂದ ಜನರಿಗಾಗಿ ಜನರಿಗೋಸ್ಕರ ಅಂದಹಾಗೆ ಅದರ ನಿದರ್ಶನವನ್ನು ಅರಸು ಕಾಲದಲ್ಲಿ ಕಾಣಬಹುದಿತ್ತು.

ಅರಸು ರವರಿಗೆ ಮುಖ್ಯಮಂತ್ರಿಗಳಿಗೆ ಆಪ್ತರಾಗುವುದಕ್ಕಿಂತ. ಜನರಿಗೆ ಹತ್ತಿರವಾಗಬೇಕು ಎಂಬುದಾಗಿ ಶಾಸಕರಿಗೆ, ಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಕಿವಿಮಾತನ್ನು ಒತ್ತಿ ಹೇಳುತ್ತಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನೊಳಗಿನ ಅವರ ಅಂತಃಕರಣ ಬಡವರ ಕೂಗು ಕೇಳಬಲ್ಲ ಸಂವೇದನಾಶೀಲ ವ್ಯಕ್ತಿತ್ವ ಅವರದ್ದಾಗಿತ್ತು.

ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಇವರು ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದು, ಇವರು ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು. 

ಅವರು ಭೂಸುದಾರಣೆ ಮಲಹೊರುವ ಪದ್ಧತಿ ನಿಷೇಧ, ಹಾವನೂರು ಆಯೋಗ ಜಾರಿಗೆ, ಋಣ ಪರಿಹಾರ ಕಾಯ್ದೆ ಮತ್ತು ಅದರಲ್ಲೂ ಹಿಂದುಳಿದ ವರ್ಗಗಳ ಯುವಜನತೆಯನ್ನು ಬೆಳೆಸುವಂತಹ ಕೆಲಸ ಮಾಡಿದ್ದಾರೆ.

ದೇವರಾಜ ಅರಸು ಅವರ ಕಾರ್ಯಕ್ರಮಗಳು ಆಡಳಿತಾತ್ಮಕ ನಿಲುವುಗಳು ಕಾರ್ಯರೂಪಕ್ಕೆ ತಂದ ಕಾಯ್ದೆಗಳು. ಅದರಿಂದಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾರ್ಥರಹಿತ, ದ್ವೇಷರಹಿತ ರಾಜಕಾರಣ. ಅವರ ಜನಪರ ನಿಲುವು. ಬಡವರನ್ನು ಕಂಡರೆ ಅಯ್ಯೋ ಅನ್ನುವುದಲ್ಲ. ಅವರಿದ್ದಲ್ಲಿಗೇ ಹೋಗಿ ಧೈರ್ಯ, ಧೈರ್ಯ ತುಂಬಿ ಬದುಕುವ ಭರವಸೆ ನೀಡುತ್ತಿದ್ದರು, ಅದು ಅರಸರ ವಿಶಿಷ್ಟಗುಣ. ರಾಜ್ಯದ ಅಭಿವೃದ್ಧಿಯ ಬಗೆಗಿದ್ದ ದೂರದೃಷ್ಟಿ , ಸಾಮಾಜಿಕ ಬದಲಾವಣೆಗಳ ಬಗೆಗಿದ್ದ ಚಿಂತನೆಗಳನ್ನು ನಮ್ಮ ಈಗಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಿದೆ.

ಅರಸರು ಚುನಾವಣೆಯ ಸೋಲು – ಗೆಲುವುಗಳಿಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ರಾಜಕಾರಣವೆಂದರೆ ಅದೆಲ್ಲ ಸಾಮಾನ್ಯ ಎಂದು ಭಾವಿಸಿದ್ದರು. ಆದರೆ ಇವತ್ತಿನ ರಾಜಕಾರಣಿಗಳಿಗೆ ಸಂಘಟನೆಯ ಕೌಶಲ್ಯತೆ ಇಲ್ಲ, ಕ್ರಿಯಾಶೀಲತೆ ಇಲ್ಲ, ಕಲಿಕಾ ಸಂಸ್ಕೃತಿ ಇಲ್ಲ, ಚುನಾವಣಾ ಸಂಸ್ಕೃತಿ ಬಿಟ್ಟರೆ ಇನ್ನೊಂದು ಮತ್ತೊಂದು ಗೊತ್ತಿಲ್ಲ.

ರಾಜಕಾರಣಿಯಲ್ಲಿ ಇರಲೇಬೇಕಾದ ವಿಶೇಷವಾದ ಗುಣವೊಂದು ಅರಸು ಅವರಲ್ಲಿತ್ತು. ರಾಜ್ಯದ ಯಾವುದೇ ಮೂಲೆಗೆ ಹೋಗಲಿ , ಜನರನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದರು. ಮತ್ತು ಹೆಗಲ ಮೇಲೆ ಕೈಹಾಕಿ ಕಷ್ಟಸುಖ ವಿಚಾರಿಸುತ್ತಿದ್ದರು. ದೇವರಾಜು ಅರಸು ರಲ್ಲಿ ಒಂದು ವಿಶೇಷ ಗುಣವಿತ್ತು. ನಿರ್ಲಕ್ಷಿತ ಸಮುದಾಯಗಳಿಂದ ಬಂದ ವಿದ್ಯಾವಂತ ಉತ್ಸಾಹಿ ತರುಣರನ್ನು ರಾಜಕೀಯ ರಂಗಕ್ಕೆ ಕರೆತಂದು, ಅಧಿಕಾರದ ಸ್ಥಾನಮಾನ ನೀಡುವುದು. ಅರಸು ಅವರಷ್ಟೇ ಅಧಿಕಾರ ಅನುಭವಿಸಲಿಲ್ಲ. ಸಮಾಜದ ಕಟ್ಟಕಡೆಯ ಜನರಿಗೂ ಅಧಿಕಾರವನ್ನು ಮತ್ತು ಸ್ಥಾನಮಾನ ಕಲ್ಪಿಸಿ ಕೊಟ್ಟಿದ್ದರು ಅರಸು.

ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು…

ಬರಹ ಲೇಖಕರ ಅಭಿಪ್ರಾಯವೇ ಹೊರತು ವೆಬ್‌ಸೈಟ್‌ನ ಅಭಿಪ್ರಾಯವಲ್ಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?