Publicstory/prajayoga
ತಿಪಟೂರು: ಕುಂಚಿಟಿಗ ಸಮುದಾಯದವರು ರಾಜ್ಯದಲ್ಲಿ 26 ಲಕ್ಷದಷ್ಟು ಜನರಿದ್ದು ಎಲ್ಲರೂ ಸಂಘಟಿತರಾದಾಗ ಮಾತ್ರ ಯಾವುದೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಕುಂಚಟಿಗ ಮಹಾಸಭಾದ ಅದ್ಯಕ್ಷ ಮುರಳೀದರ್ ಹಾಲಪ್ಪ ಕರೆ ನೀಡಿದರು.
ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಯಗಚೀಕಟ್ಟೆ ಗ್ರಾಮದಲ್ಲಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯದ ಗರುಡಗಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಚಿಗ ಸಮುದಾಯವರು ಸಂಘಟನೆಯಲ್ಲಿ ಹಿಂದುಳಿದಿರುವುದರಿಂದಲೇ ಇಂದು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ನಾಯಕರ ಮನೆಯ ಬಾಗಿಲಿಗೆ ಹೋಗಬೇಕಾಗಿದೆ. ನಾವು ಸಂಘಟನೆಯನ್ನು ಮಾಡಿಕೊಂಡರೆ ಜನಪ್ರತಿನಿದಿಗಳೆ ನಮ್ಮ ಮನೆಬಾಗಿಲಿಗೆ, ಸಂಘ ಸಂಸ್ಥೆಗಳ ಬಾಗಿಲಿಗೆ ಬರುತ್ತಾರೆ ಎಂದರು.
ಶಿಕಾರಿಪುರದಲ್ಲಿ ನಮ್ಮ ಸಂಘಟನೆ ಪ್ರಬಲವಾಗಿರುವುದರಿಂದ ಸಂಸದ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಸಮುದಾಯದ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಾರೆ. ತಿಪಟೂರು, ತುರುವೇಕೆರೆ ಹಾಗೂ ಗುಬ್ಬಿಯನ್ನು ಸೇರಿಸಿಕೊಂಡು ಸಂಘವನ್ನು ಸ್ಥಾಪಿಸಿಕೊಳ್ಳಿ ಹಾಗೂ ಅದರಿಂದ ಗುರುತಿಸಿಕೊಂಡು ಸಣ್ಣದಾಗಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾವನ್ನು ನೀಡಿ. ಸಮಾಜದ ಸ್ವಾಮೀಜಿಗಳು ಹಾಗೂ ಕೆಲವು ಮುಖಂಡರುಗಳು ವಿದ್ಯಾಭ್ಯಾಸಮಾಡುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆತೆಗೆದುಕೊಳ್ಳುವ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ಕೊಡುವ ಕೆಲಸವನ್ನು ಮಾಡಬೇಕು ಎಂದರು.
ಕುಂಚಿಟಿಗ ಸಮುದಾಯದ ಗುಬ್ಬಿ ತಾಲೂಕು ಕಾರ್ಯದರ್ಶಿ ಪುಟ್ಟಲಿಂಗಯ್ಯ ಮಾತನಾಡಿ, ಗುಬ್ಬಿ ತಾಲೂಕಿನಲ್ಲಿ ಕುಂಚಿಟಿಗ ಸಮುದಾಯದಿಂದ ನಮ್ಮಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಗುತ್ತದೆ. ಅದಕ್ಕೆ ಎಲ್ಲರೂ ಅರ್ಜಿಯನ್ನು ಸಲ್ಲಿಸಿ. ನಾವೆಲ್ಲರೂ ಒಂದಾದಾಗ ಮಾತ್ರ ಸರ್ಕಾರಿ ಸೌಲತ್ತುಗಳು ಸಿಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಿವಣ್ಣ, ಗೋವಿಂದಪ್ಪ, ಚಾಕುವಳ್ಳಿ ಶ್ರೀನಿವಾಸ್, ಭೈರಪ್ಪ, ಕೃಷ್ಣಮೂರ್ತಿ, ಸೀನಪ್ಪ ರಾಘು ಉಪಸ್ಥಿತರಿದ್ದರು.