Publicstory/prajayoga
//ಓದುಗರ ಪತ್ರ//
ಕೊಡಗು ಮಳೆಹಾನಿ ಪ್ರದೇಶಗಳ ವೀಕ್ಷಣೆಯ ಪ್ರವಾಸಕ್ಕೆ ತೆರಳಿದ್ದ ವಿರೋಧ ಪಕ್ಷದ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆದು ಅವಮಾನಿಸಿರುವುದು ಖಂಡನೀಯ. ಇದು ಭಾರತೀಯ ಸಂಸ್ಕೃತಿ ಅಲ್ಲ. ಈ ಕೃತ್ಯ ಎಸಗಿದ ಗೂಂಡಾಗಳ ಮೇಲೆ ಕಠಿಣ ಕ್ರಮ ತಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ಘಟನೆಗೆ ಬಿಜೆಪಿ ಸರ್ಕಾರ ನೇರವಾಗಿ ಕುಮ್ಮಕ್ಕೂ ಕೊಡುತ್ತಿರುವಂತೆ ಕಾಣುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಇಂದು ಅಧಿಕಾರದಲ್ಲಿದ್ದಾರೆ. ಇವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಕೋಮು ಗಲಭೆ ನಡೆಯುತ್ತಲೇ ಇರುವುದು ಒಳ್ಳೆಯ ಬೆಳವಣಿಗೆಯಲ್ಲ.
ಮುಖ್ಯಮಂತ್ರಿಯ ನೆರಳು ಎಂದೇ ಕರೆಯಲಾಗುವ ಸಂವಿಧಾನಿಕ ಹುದ್ದೆ ವಿರೋಧ ಪಕ್ಷದ ನಾಯಕರ ಸ್ಥಾನ. ಈ ಹುದ್ದೆಯಲ್ಲಿರುವ ಸಿದ್ದರಾಮಯ್ಯರನ್ನು ಈ ರೀತಿ ಅಪಮಾನಿಸಿರುವುದು ಯಾರೂ ಮೆಚ್ಚುವಂತದ್ದಲ್ಲ. ರಾಜ್ಯ ಕಂಡ ರಾಜಕೀಯ ಮತ್ಸದಿಯ ಮೇಲೆಯೇ ಈ ರೀತಿ ಹಲ್ಲೆಗೆ ಪ್ರಯತ್ನಸಿರುವ ಅವರು, ನಾಳೆ ನಮ್ಮಂತ ಅಭಿಮಾನಿಗಳು, ಕಾರ್ಯಕರ್ತರ ಮೇಲೆ ಕೃತ್ಯ ಎಸಗುವುದಿಲ್ಲ ಎನ್ನುವುದಕ್ಕೆ ಏನು ಸಾಕ್ಷಿ? ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಇದರ ಬಗ್ಗೆ ತುರ್ತಾಗಿ ಗಟ್ಟಿ ನಿರ್ಧಾರ ಕೈಗೊಂಡು ಪುಂಡರನ್ನು ಬಂಧಿಸಿ ಗಡಿಪಾರು ಮಾಡಬೇಕು. ಸಿದ್ದರಾಮಯ್ಯರಿಗೆ ಮತ್ತು ಬೆಂಬಲಿಗರಿಗೆ ಸೂಕ್ತ ರೀತಿಯ ಭದ್ರತೆ ಒದಗಿಸಬೇಕು ಎಂದು ಅಗ್ರಹಿಸುತ್ತೇವೆ.
ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ಮರುಕಳಿಸಿದರೆ ಕರ್ನಾಟಕದ ಬೀದರ್ ನಿಂದ ಚಾಮರಾಜನಗರದ ವರಗೆ, ಕಾರವಾರದಿಂದ ಮುಳುಬಾಗಿಲು ವರಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲು ಬಯಸುತ್ತೇವೆ.
ಬರಹ ವೆಬ್‌ಸೈಟ್‌ನ ಅಭಿಪ್ರಾಯವಲ್ಲ, ಲೇಖಕರ ಅಭಿಪ್ರಾಯ