Publicstory/prajayoga
ತುಮಕೂರು: ಗಣಪತಿ ಪೆಂಡಾಲ್ ನಲ್ಲಿ ಯಾವುದೇ ರೀತಿಯ ಡಿಜೆ ಬಳಸುವಂತಿಲ್ಲ ಹಾಗೂ ಫ್ಲೆಕ್ಸ್ ಬಳಸುವಂತಿದ್ದರೆ ಕಾರ್ಪೊರೇಶನ್ ಅವರ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ತಿಳಿಸಿದರು.
ನಗರದ ಚಿಲುಮೆ ಪೊಲೀಸ್ ಸಮುದಾಯದ ಭವನದಲ್ಲಿ ಏರ್ಪಡಿಸಿದ್ದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ಹಾಗೂ ಪೆಂಡಾಲ್ ಆಯೋಜಕರು, ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಪರಿಪಾಲನೆಯೇ ಮುಖ್ಯ. ಫ್ಲೆಕ್ಸ್ ಹಾಕಿದವರು ಜವಾಬ್ದಾರಿ ಹೊರಬೇಕು. ಯಾಕೆಂದರೆ ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಬ್ಬ ಶಾಂತಿಯುತವಾಗಿ ನೆರವೇರಬೇಕು. ಈ ಎಲ್ಲಾ ನಿಬಂಧನೆಗಳಿಗೆ ಸಂವಾದದಲ್ಲಿ ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ. ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವ ಮುಖಂಡರವರನ್ನ ಕರೆಸಿ , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಡೆಸಿದ ಶಾಂತಿ ಸಭೆ ಯಶಸ್ವಿಯಾಯಿತು. ಗಣಪತಿ ಕೂರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದೇವೆ ಎಂದರು.
ಈ ಸಭೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಎಸ್ಪಿ ಉದೇಶ್ ಟಿಜೆ, ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆಯ ಮುಖ್ಯಸ್ಥರು, ನಗರ ಡಿಎಸ್ಪಿ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.