Publicstory/prajayoga
ಶಿರಾ: ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಆರ್‌ಎಸ್ ಪಕ್ಷ ನಡೆಸಿದ್ದ ಕಾರ್ಯಾಚರಣೆ ಪ್ರತಿಫಲವಾಗಿ ನೂತನ ವೈದ್ಯರನ್ನು ನೇಮಿಸುವುದಾಗಿ ಟಿಎಚ್ಒ ಭರವಸೆ ನೀಡಿದ್ದಾರೆ ಎಂದು ಶಿರಾ ಕ್ಷೇತ್ರದ ವಿಧಾಸಭಾ ಸಂಭಾವ್ಯ ಅಭ್ಯರ್ಥಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ವೈದ್ಯರು ಮೂರು ತಿಂಗಳಿನಿಂದಲೂ ಗೈರಾಗಿದ್ದರು. ನಾವು ಆ.26 ರಂದು ಬೇಟಿ ನೀಡಿದಾಗ ವೈದ್ಯರು ಇರಲಿಲ್ಲ. ಫ್ಯಾಕ್ಟ್ ಚೆಕ್ ಮಾಡಲು ಮತ್ತೊಮ್ಮೆ ಆ.29 ರಂದು ಕೂಡ ಭೇಟಿ ನೀಡಿದಾಗ ವೈದ್ಯರ ಗೈರು ಹಾಜರಿಯನ್ನು ಖಚಿತ ಪಡಿಸಿಕೊಂಡು ಫೇಸ್ ಬುಕ್ ವೀಡಿಯೋ ಲೈವ್ ಮಾಡಿ, ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ಅವರ ಗಮನಕ್ಕೆ ತಂದಿದ್ದೆವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆರೋಗ್ಯ ಕೇಂದ್ರಕ್ಕೆ ಮತ್ತೊಬ್ಬ ವೈದ್ಯರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸಾರ್ವಜನಿಕರ ಬೆಂಬಲ ಸಿಕ್ಕಿದೆ. ಇದು ಹೀಗೇ ಮುಂದುವರೆಯಲಿ ಎಂದು ಪ್ರಕಟಣೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.