Publicstory/Prajayoga
– ವರದಿ, ಸಿರಾಜ್ ಅಹಮದ್ ಕೆ ಎ
ಕೊಡಿಗೇನಹಳ್ಳಿ: ತಂಗಿಯ ನೆನಪು ಮರೆಯಲಾಗದೆ ನೆನಪಿಗಾಗಿ ಇಡೀ ಗ್ರಾಮದ ಮಹಿಳೆಯರಿಗೆ ಗೌರಿ ಬಾಗಿನ ನೀಡುವ ಮೂಲಕ ಅಣ್ಣ ತಂಗಿ ಸಂಬಂಧಕ್ಕೆ ಇಲ್ಲೊಬ್ಬರು ನೀರೆರರೆದಿದ್ದಾರೆ.
ಹೌದು ಹೊಬಳಿಯ ದೊಡ್ಡಮಾಲೂರು ಗ್ರಾಮದ ನರಸಿಂಹಮೂರ್ತಿ ಕೃಷಿಕರಾಗಿದ್ದು, ಕಳೆದ 8 ವರ್ಷಗಳ ಹಿಂದೆ ತಂಗಿ ವಿಶಾಲಾಕ್ಷಿ ಅನಾರೋಗ್ಯದ ಕಾರಣ ಮೃಪಟ್ಟಿದ್ದರು. ತನ್ನ ತಂಗಿಯ ನೆನಪು ಮರೆಯಬಾರದೆಂದು ಪ್ರತಿ ವರ್ಷ ಗೌರಿ ಗಣೇಶ ಹಬ್ಬದಂದು ಇಡೀ ಗ್ರಾಮದ ಮಹಿಳೆಯರಿಗೆ ಗೌರಿ ಬಾಗಿನ ನೀಡುವ ಮೂಲಕ ತನ್ನ ತಂಗಿಯನ್ನು ಕಾಣುತ್ತಿದ್ದಾರೆ.
ಈ ವೇಳೆ ಮಾತನಾಡಿದ ನರಸಿಂಹಮೂರ್ತಿ, ನನಗೆ ದೇವರು ಬೇಕಾದದ್ದು ಕೊಟ್ಟಿದ್ದಾನೆ. ಆದರೆ, ಇದೀಗಾ ನನಗೆ ಈ ಗ್ರಾಮಸ್ಥರೇ ಅಕ್ಕ ತಂಗಿ. ಕಳೆದ ವರ್ಷಗಳಿಂದ ಗೌರಿ ಬಾಗಿನ ನೀಡುವುದು ರೂಢಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಇದನ್ನು ಮುಂದುವರೆಸುತ್ತೇನೆ ಎಂದರು.
___________________________________________
ಇವರು ಯಾವುದೇ ರಾಜಕೀಯವಾಗಲಿ, ರಾಜಕೀಯ ಲಾಭಕ್ಕಾಗಿ ಗೌರಿ ಬಾಗಿನ ನೀಡುತ್ತಿಲ್ಲ. ತನ್ನ ತಂಗಿಯ ಸವಿನೆನಪಿಗಾಗಿ ಇಂತಹ ಕಾರ್ಯ ಮಾಡುತ್ತಿದ್ದಾರೆ. ಇವರ ಅಣ್ಣ ತಂಗಿಯ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಪಟೇಲ್ ಸಂಜೀವ್ ಗೌಡ, ಅಧ್ಯಕ್ಷ
ದೊಡ್ಡಮಾಲೂರು ಹಾಲು ಉತ್ಪಾದಕರ ಸಹಕಾರ ಸಂಘ
___________________________________________
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹನುಮಂತರಾಯ, ಗ್ರಾಪಂ ಹಾಲಿ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಲಿಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟಪ್ಪ, ಎಸ್ಡಿಎಂಸಿ ಅಧ್ಯಕ್ಷ ರಾಮಂಜಿ. ಮಾಜಿ ಸದಸ್ಯ ಎಲ್ಲಪ್ಪ, ಗಂಗಪ್ಪ, ಆನಂದ್, ಈರಣ್ಣ, ರಾಮಪ್ಪ ಹಾಜರಿದ್ದರು.