Tuesday, September 17, 2024
Google search engine
HomeUncategorizedಅಹಿಂದ-ಅಲೆಮಾರಿಗಳ ಬಂಧುಮಿತ್ರ : ಸಿದ್ದರಾಮಯ್ಯ ಪರ ಎದ್ದ ಅಲೆ

ಅಹಿಂದ-ಅಲೆಮಾರಿಗಳ ಬಂಧುಮಿತ್ರ : ಸಿದ್ದರಾಮಯ್ಯ ಪರ ಎದ್ದ ಅಲೆ

(ನೆಹರೂ ಸರ್ಕಲ್’ನಿಂದ ತಾಲ್ಲೂಕು ಕಚೇರಿವರೆಗೆ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ)

ಚಿಕ್ಕನಾಯಕನಹಳ್ಳಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕರ್ನಾಟಕ ರಾಜ್ಯಪಾಲರ ನಡೆಯ ವಿರುದ್ಧ ಚಿಕ್ಕನಾಯಕನಹಳ್ಳಿ-ಹುಳಿಯಾರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕ್ಷೇತ್ರದ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್’ರವರ ನೇತೃತ್ವದಲ್ಲಿ ಪಟ್ಟಣದ ನೆಹರೂ ಸರ್ಕಲ್’ನಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ಪರ ಪಕ್ಷಪಾತ ನಡೆಸುತ್ತಿರುವ ಕರ್ನಾಟಕದ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ತಹಸೀಲ್ದಾರ್ ಕೆ ಪುರಂದರ್’ರವರ ಮೂಲಕ ಘನತೆವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಸ್ ಕಿರಣ್ ಕುಮಾರ್, ಬಿಜೆಪಿಯ ಹಲವು ಹಿರಿಯ ನಾಯಕರ ವಿರುದ್ಧ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದಾಗ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲಿಲ್ಲ. ಜೆಡಿ(ಎಸ್) ಪಕ್ಷದ ಮುಖಂಡರ ವಿರುದ್ಧ ಹಲವು ದೂರುಗಳು ದಾಖಲಾದಾಗಲೂ ಆ ನಾಯಕರುಗಳ ವಿರುದ್ಧವೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲಿಲ್ಲ.

ಈಗ ಅಬ್ರಹಾಂ ಎಂಬ ಮೂಮೂಲಿ ಗಿರಾಕಿಯ ದೂರಿನನ್ವಯ ಏಕಾಏಕಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಪಕ್ಷಪಾತಿ ಮತ್ತು ಅಸಾಂವಿಧಾನಿಕವಾದ ನಡೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಗ್ಯಾರಂಟಿ ಸಿದ್ಧರಾಮಯ್ಯ ಎಂದು ದೇಶದಾದ್ಯಂತ ಹೆಸರು ಮಾಡಿ, ನುಡಿದಂತೆ ನಡೆಯುತ್ತಿರುವ ಒಬ್ಬ ರಾಷ್ಟ್ರಮಟ್ಟದ ಅಹಿಂದ ನಾಯಕನನ್ನು ಹಿಮ್ಮೆಟ್ಟಿಸುವ ಪಿತೂರಿ ಇದು ಎಂದು ಅವರು ರಾಜ್ಯಪಾಲರ ಕಾರ್ಯವೈಖರಿಯನ್ನು ಖಂಡಿಸಿದರು.

ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಉಚಿತ ಗ್ಯಾರಂಟಿ ಹಾಗೂ ಉಚಿತ ಭಾಗ್ಯ ಯೋಜನೆಗಳ ಹರಿಕಾರ ಸಿದ್ಧರಾಮಯ್ಯನವರನ್ನು ನಾಡಿನ ಅನೇಕ ವಿಚಾರವಂತರು ದೇವರಾಜ ಅರಸ’ರ ಮೇರು ವ್ಯಕ್ತಿತ್ವಕ್ಕೆ ಹೋಲಿಸುತ್ತಾರೆ.

ಹಿಂದುಳಿದ ವರ್ಗಗಳ, ಶೋಷಿತ ವರ್ಗಗಳ ಆಶಾಕಿರಣವಾಗಿರುವ ಸಿದ್ಧರಾಮಯ್ಯನವರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಾಸಿಕ್ಯೂಷನ್ ಭೂತವನ್ನು ಬಿಡಲಾಗಿದೆ. ಬಿಜೆಪಿಯ ವಯೋವೃದ್ಧ ಹಿರಿಯ ನಾಯಕರುಗಳ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಅವರ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಲಾಗದೆ ರಾಜ್ಯಪಾಲರೇ ಎಂದು ಪ್ರಶ್ನಿಸಿದರು. ಉಚಿತ ಭಾಗ್ಯಗಳನ್ನು ನೀಡುವುದರ ಮೂಲಕ ಬಡವರ, ಬಲಹೀನರ, ಹಿಂದುಳಿದವರ ಮತ್ತು ದಲಿತರ ಪರವಾದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರ ಕಾರಣದಿಂದ ಅದಾನಿ-ಅಂಬಾನಿಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲದಂತಾಗಿದೆ. ಅವರ ವ್ಯಾಪಾರಕ್ಕೆ ಜಾಗ ಮಾಡಿಕೊಡುವ ಸಲುವಾಗಿ ಅಹಿಂದ ವರ್ಗಗಳ ಪ್ರಬಲ ನಾಯಕನಾಗಿ ದೇಶದಾದ್ಯಂತ ಸದ್ದು ಮಾಡುತ್ತಿರುವ ಸಿದ್ಧರಾಮಯ್ಯನವರನ್ನು ಮೂಲೆಗುಂಪು ಮಾಡಲು ಮೋದಿ-ಶಾ ಹುನ್ನಾರ ನಡೆಸಿದ್ದಾರೆ. ಅದರ ಕಾರ್ಯಾಚರಣೆಯನ್ನು ರಾಜಭವನದ ಮೂಲಕ ಮಾಡಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಮಹಾನಡೆಯನ್ನು ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನಾವು ಅನ್ನರಾಮಯ್ಯ ಎಂದೇ ಕರೆಯುತ್ತೇವೆ. ಈ ಅನ್ನರಾಮಯ್ಯನ ಜೊತೆ ನಾವೆಲ್ಲ ಚತುಷ್ಕೋಟಿ ಕನ್ನಡಿಗರು ನಿಂತಿದ್ದೇವೆ. ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್’ರವರೆ ನಿಮ್ಮ ನಡೆ ನಿಸ್ಪಕ್ಷವಾದುದಾಗಿರಲಿ. ಪಕ್ಷಪಾತಿ ನಡೆ ಸಂವಿಧಾನ ವಿರೋಧಿಯಾದಂಥವು. ಕೇಂದ್ರದ ಕೈಗೊಂಬೆ ಆಗಬೇಡಿ. ಬಸವಣ್ಣನ ಕಲ್ಯಾಣ ಕರ್ನಾಟಕದಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನಾವಿಲ್ಲಿ ಸೇರಿದ್ದೇವೆ. ಮರೆಯದಿರಿ, ಅದಾನಿ-ಅಂಬಾನಿಗಳ ಸ್ನೇಹಿತನಲ್ಲ, ಅಹಿಂದ-ಅಲೆಮಾರಿಗಳ ಬಂಧುಮಿತ್ರ ನಮ್ಮ ಸಿದ್ಧರಾಮಯ್ಯ ಎಂದರು.

ಘನತೆವೆತ್ತ ರಾಷ್ಟ್ರಪತಿಗಳು, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್’ರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಸಂವಿಧಾನ ಉಳಿಸಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಂಡರು.

ಪ್ರತಿಭಟನಾ ಮೆರವಣಿಗೆಯಲ್ಲಿ ಚಿಕ್ಕಣ್ಣ, ಕೃಷ್ಣೇಗೌಡ, ನಾರಾಯಣ ಗೌಡ, ಮೊಹಮ್ಮದ್ ಸಜ್ಜಾದ್ ಹುಳಿಯಾರ್, ಬೇವಿನಹಳ್ಳಿ ಚನ್ನಬಸವಯ್ಯ, ನರಸಿಂಹಮೂರ್ತಿ, ವಕೀಲ ಪರಮೇಶ್ವರ ನಾಯ್ಕ್, ರಾಜು ಬಡಗಿ, ಕಂಪನಹಳ್ಳಿ ಗೌಸ್ ಪೀರ್, ಸಾಸಲು ಮಂಜುನಾಥ್, ಬೀರಪ್ಪ, ಸೈಯದ್ ಪೀರ್, ಗಂಗಾಧರ್ ಸಿ ಹೆಚ್, ಜ಼ಾಫರ್ ಹೊನ್ನೆಬಾಗಿ, ಲಕ್ಷ್ಮಿದೇವಿ, ಜ಼ಾಕಿರ್, ಹೊರಕೇರಿ ಸಿದ್ಧಣ್ಣ, ಜಾವೆದ್ ಪಾಷಾ ಚಿ ನಾ ಹಳ್ಳಿ, ಮಂತಾಗಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.


__ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?