publicstory
ತಿಪಟೂರು: ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ನೊಣವಿನಕೆರೆ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಮಹೇಶ್ ಎನ್ ಬಿ ಎಂಬ ಗ್ರಾಮದ ಯುವಕನು ಟಾಟಾ ಏಸ್ ನಲ್ಲಿ ಸೇತುವೆ ಮೇಲೆ ಚಲಿಸುವಾಗ ನೀರಿನ ರಭಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಆದರೆ, ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಟಾಟಾ ಏಸ್ ನೀರಿನಲ್ಲಿ ಕೊಚ್ಚಿ ಹೋಗಿದೆ.
ಮಳೆ ನೀರು ತಗ್ಗಿದ ನಂತರ ಟಾಟಾ ಏಸ್ ಹೊರತೆಗೆಯಲಾಗುವುದು ಎಂದು ಮೂಲಗಳು ತಿಳಿಸಿದ್ದು, ಅಗ್ನಿಶಾಮಕ ದಳ ಶೋಧ ಕಾರ್ಯದಲ್ಲಿ ನಿರತವಾಗಿದೆ.