ತುರುವೇಕೆರೆ: ತಾಲ್ಲೂಕು ದಲಿತ ಸಂಘರ್ಷ ಮತ್ತು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಅಭಿನಂದನೆ ಹಾಗು ಬೀಳ್ಕೊಡುಗೆ ಸಮಾರಂಭ ಮತ್ತು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ, ಸಮಾಲೋಚನಾ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ.3ರಂದು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅಂದು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ನೌಕರರಾದ ನರಸಿಂಹರಾಜು, ಬೆನಕಿನಕೆರೆ ಪ್ರೌಢ ಶಾಲೆಯ ತೋಟಗಾರಿಕಾ ಶಿಕ್ಷಕ ರಾಯಸಂದ್ರ ಬೋರಪ್ಪನವರಿಗೆ ಬೀಳ್ಕೊಡಿಗೆ ಹಾಗು ತುಮಕೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯನವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಹಾಗಾಗಿ ಸಮುದಾಯದ ಬಂಧುಗಳು, ಹಿತೈಷಿಗಳು, ಸ್ನೇಹಿತರು, ದಲಿತ ಸಂಘರ್ಷ ಸಮಿತಿ ಹಾಗು ಪ್ರಗತಿಪರ ಚಿಂತಕರ ಪದಾಧಿಕಾರುಗಳು, ಸಮುದಾಯದ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕೆಂದು ದಸಂಸ ಸಂಚಾಲಕ ದಂಡಿನಶಿವರ ಕುಮಾರ್ ವಿನಂತಿಸಿಕೊಂಡಿದ್ದಾರೆ.