Tuesday, October 1, 2024
Google search engine
Homeವಿದ್ಯಾ ಸಂಸ್ಥೆಅಪರಾಧ ಕೃತ್ಯ, ಸೈಬರ್ ವಂಚನೆ: ಪೊಲೀಸರು ಹೇಳಿದ್ದೇನು?

ಅಪರಾಧ ಕೃತ್ಯ, ಸೈಬರ್ ವಂಚನೆ: ಪೊಲೀಸರು ಹೇಳಿದ್ದೇನು?

ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ

ತುಮಕೂರು: ಅಪರಾಧಿ ಕೃತ್ಯಗಳನ್ನು

ನಿಯಂತ್ರಿಸುವಲ್ಲಿ ಸಾಂವಿಧಾನಿಕ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪೊಲೀಸ್, ನ್ಯಾಯಾಂಗದ ಪಾತ್ರ ಮಹತ್ತರವಾಗಿದ್ದು, ಯುವ ಕಾನೂನು ಪದವೀಧರರು ಬದಲಾಗುತ್ತಿರುವ ಅಪರಾಧಿ ಕೃತ್ಯಗಳಸ್ವರೂಪ, ಕಾನೂನುಗಳ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಗರ ವೃತ್ತ ಆರಕ್ಷಕ ನಿರೀಕ್ಷಕ ದಿನೇಶ್‌ಕುಮಾ‌ರ್ ತಿಳಿಸಿದರು.

ಹಿರಿಯ ಪತ್ರಕರ್ತ ಹರೀಶ್ ಆಚಾರ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅವರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಧುನಿಕ ಯುಗದಲ್ಲಿ ಅಪರಾಧ ತನಿಖೆ ಹಾಗೂ ಸವಾಲುಗಳ ಕುರಿತ ಅಂತರ್ ಕಾಲೇಜು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಅಪರಾಧಿಕ ನ್ಯಾಯ ವ್ಯವಸ್ಥೆ ಎಷ್ಟು ಸುಂದರವಾಗಿದೆ ಎಂದರೆ ಹತ್ತು ಆರೋಪಿಗಳಿಗೆ ಶಿಕ್ಷೆಯಿಂದ ತಪ್ಪಿಸಿಕೊಂಡರೂ ತೊಂದರೆಯಿಲ್ಲ. ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದನ್ನು ಪ್ರತಿಪಾದಿಸುತ್ತದೆ. ಯಾವುದೇ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿಯಷ್ಟೇ ಅಂತಿಮವಲ್ಲ.ಕೇಸ್ ಇತ್ಯರ್ಥವಾಗುವವರೆಗೂ

ತನಿಖೆ ಮುಂದುವರಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಅವಕಾಶವಿದೆ ಎಂದರು.

ಜುಲೈ 1ರಿಂದ ಜಾರಿಗೆ ಬರುತ್ತಿರುವ ಭಾರತೀಯ ನ್ಯಾಯ ಸಂಹಿತೆಯಡಿ ಹಿಂದಿನ ఐసిసి ಕೋಡ್‌ ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ಗುರುತಿಸಬಹುದಾಗಿದೆ. ಮುಂದೆ ನ್ಯಾಯವಾದಿಗಳು, ನ್ಯಾಯಾಧೀಶರಾಗುವ ಭವಿಷ್ಯದ ಕಾನೂನು ಪದವೀಧರರ ಮೇಲೆ ದೇಶದ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಬಹುದೊಡ್ಡ ಹೊಣೆಗಾರಿಕೆಯಿದೆ ಎಂದರು.

ಸೈಬರ್ ಕೈಂ ಬೇಧಿಸುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದ್ದು, ಜಗತ್ತಿನ ಮೂಲೆಮೂಲೆಯಲ್ಲಿ ಕುಳಿತು ಮಾಡುತ್ತಿರುವ ಈ ಅಪರಾಧಿ ಕೃತ್ಯಗಳನ್ನು ನಿಯಂತ್ರಿಸಲು ಜನಜಾಗೃತಿಯೇ ಪ್ರಮುಖ ಪರಿಹಾರ ಮಾರ್ಗವಾಗಿದೆಯೆಂದರು.

ಸಿಇಎನ್ ಠಾಣೆಯ ಅಧಿಕಾರಿ ಶಿವಕುಮಾರ್ ಲಮಾಣಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡು ಹ್ಯಾಕರ್‌ಗಳು ಲಿಂಕ್ ಕಳುಹಿಸಿ ಕಂಪ್ಯೂಟರ್, ಮೊಬೈಲ್‌ನಲ್ಲಿ ಅಳಿಸಲಾಗದ ತಂತ್ರಾಂಶವನ್ನು ಅಪ್ ಲೌಡ್ ಮಾಡಿ ಖಾತೆಯ ಹಣಲಪಟಾಯಿಸುವ ಹೊಸ

ಮಾದರಿಯನ್ನು ಕಂಡುಕೊಂಡಿದ್ದು, ಈ ಬಗ್ಗೆ ಹೆಚ್ಚು ಜನಜಾಗೃತಿ ಅಗತ್ಯವಿದೆ ಎಂದರು.

ಅನಧಿಕೃತವಾಗಿ ಬರುವ ಲಿಂಕ್, ಆಫರ್‌ಗಳಿಗೆ ಪ್ರತಿಕ್ರಿಯಿಸಲು ಯಾರು ಮುಂದಾಗಬಾರದು ಎಂದು ತಿಳಿಹೇಳಿದರು.

ಮುಖ್ಯ ಅತಿಥಿಯಾಗಿ ಪ್ರಜಾಪ್ರಗತಿ

ಮುಖ್ಯ ವರದಿಗಾರ ಎಸ್.ಹರೀಶ್

ಆಚಾರ್ಯ ಮಾತನಾಡಿ 20216 ಹೋಲಿಸಿದರೆ 2023ರಲ್ಲಿ ದೇಶದಲ್ಲಿ ಸೈಬ‌ರ್ ಕೈಂ ರೇಟ್ ಶೇ 450 ಪ್ರತಿಶತ ಹೆಚ್ಚಳವಾಗಿದ್ದು, ಕೇಂದ್ರ ಗೃಹ ಸಚಿವಾಲಯದ ವರದಿಯ ಪ್ರಕಾರವೇ 2 ಲಕ್ಷ ಮಂದಿ 2022-23ನೇ ಸಾಲಿನಲ್ಲಿ ಸೈಬರ್ ಕೈಂ ಸಂತ್ರಸ್ಥರಾಗಿ 72.1.1 ಕೋಟಿ ಹಣ ಕಳೆದುಕೊಂಡಿದ್ದಾರೆ. ಹೆಚ್ಚುತ್ತಿರುವ ಸೈಬರ್ ಕೈಂ ಕಡಿವಾಣಕ್ಕೆ ಸೈಬರ್ ಠಾಣೆಗಳ ಹೆಚ್ಚಳ, ಜಾಗೃತಿ ಹೆಚ್ಚಿನ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಎಚ್‌ಎಂಎಸ್ ವಿದ್ಯಾಸಂಸ್ಥೆ ಸಂಸ್ಥಾಪಕ ಹಾಗೂ ಮಾಜಿ ಶಾಸಕ ಎಸ್.ಷಫಿ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ಅರಿವಿಲ್ಲದಂತೆಯೇ ಖಾತೆಗಳ ಹಣ ಡ್ರಾ ಆಗುತ್ತಿರುವ ಸೈಬ‌ರ್ ಅಪರಾಧಗಳನ್ನು ಕೇಳುತ್ತಿದ್ದರೆ, ನಮ್ಮ ಬ್ಯಾಂಕ್ ಖಾತೆಗಳು ಎಷ್ಟು ಸುರಕ್ಷಿತವಾಗಿವೆ ಎಂಬ ಅನುಮಾನ ಕಾಡುತ್ತಿದೆ. ಸೈಬರ್ ಅಪರಾಧ ಪ್ರಕರಣಗಳ ತನಿಖೆಯು ವಿಳಂಬಗತಿಯಲ್ಲಿ ಸಾಗುತ್ತಿದ್ದು, ಶಿಕ್ಷೆಯ ವಿಧಿಸಿದ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಸೈಬರ್ ಕೈಂನಲ್ಲಿ ಸಿಲುಕದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸುಫಿಯಾ ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗ ಉತ್ತಮ ಕಾರ್ಯಾಗಾರ ಆಯೋಜಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ ನೀಡಿರುವುದು ಒಳ್ಳೆಯ ಬೆಳವಣಿಗೆಯೆಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ರಮೇಶ್, ಉಪಪ್ರಾಂಶುಪಾಲ ಓಬಯ್ಯ, ಪ್ರಾಧ್ಯಾಪಕರುಗಳಾದ ಪ್ರೊ. ಸಿ.ಕೆ. ಮಹೇಂದ್ರ, ಪ್ರೊ.ಗೌರಿಶಂಕರ್, ಪ್ರೊ. ಮಮತಾ, ಪ್ರೊ. ರೇಣುಕಾ, ಪ್ರೊ.ಕಾಶಿಪ್ ಅಹಮದ್, ಪ್ರೊ. ತರುಣಂ, ಪ್ರೊ. ದಿವ್ಯಾ, ಪ್ರೊ. ಪುರುಷೋತ್ತಮ, ಪ್ರೊ.ಶ್ರೀನಿವಾಸ್, ಮೇಲ್ವಿಚಾರಕ ಜಗದೀಶ್, ಇತರರು ಉಪ,ಸ್ಥಿತರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?