Monday, May 27, 2024
Google search engine
Homeತುಮಕೂರು ಲೈವ್'ಆಧುನಿಕ ಅತ್ತಿಮಬ್ಬೆ' ಶಾಂತಾ ಸನ್ಮತಿಕುಮಾರ್ ಇನ್ನಿಲ್ಲ

‘ಆಧುನಿಕ ಅತ್ತಿಮಬ್ಬೆ’ ಶಾಂತಾ ಸನ್ಮತಿಕುಮಾರ್ ಇನ್ನಿಲ್ಲ

ಕೆ.ಎಸ್.ಸಿದ್ದಲಿಂಗಪ್ಪ


ತುಮಕೂರು: ಹಿರಿಯ ಮಹಿಳಾ ಸಾಹಿತಿ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷೆ ಶಾಂತಾ ಸನ್ಮತಿಕುಮಾರ್ ಭಾನುವಾರ ವಯೋಸಹಜದಿಂದ ನಿದಾನರಾಗಿದ್ದಾರೆ.

81 ಸಂವತ್ಸರಗಳನ್ನು ಕಂಡ ಇವರು ತುಮಕೂರು ದಿಗಂಬರ ಜೈನ ಸಮಾಜದ ಮಾಜಿ ಅಧ್ಯಕ್ಷರಾದಂತ ಎಂ. ಪಿ. ಸನ್ಮತಿಕುಮಾರ್ ರವರ ಧರ್ಮಪತ್ನಿ. ತುಮಕೂರು TGMC ಬ್ಯಾಂಕಿನ ನಿರ್ದೇಶಕರಾದ ಜಿನೇಶ್ ಜೈನ ಹಾಗೂ ನಂದ ಸುಮತಿಕುಮಾರ್ ಎಂಬ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.

ಜೈನ ಮಹಿಳಾ ಸಮಾಜದ ಮೂಲಕ ಅನೇಕ ಸಾರ್ಥಕ ಸಾಧನೆಗಳನ್ನು ಮಾಡಿ ಅತ್ತಿ ಮಬ್ಬೆ ವಿದ್ಯಾ ಸಂಸ್ಥೆ ಸ್ಥಾಪನೆಗೆ ಕಾರಣರಾದವರು, ಅನೇಕಸಂಘ ಸಂಸ್ಥೆಗಳ ಬೆಳವಣಿಗೆಗೆ ಸಹಾಯಹಸ್ತ ನೀಡುತ್ತ, ಧಾರ್ಮಿಕವಾಗಿಯೂ ಸಾಧನೆ ಮಾಡಿ ಆಧುನಿಕ ಅತ್ತಿಮಬ್ಬೆ ಎಂದು ಹೆಸರು ಮಾಡಿದ್ದರು.

ಸಾಹಿತಿಯಾಗಿ ಅನೇಕ ಕೃತಿಗಳನ್ನು, ಜೈನ ಧರ್ಮೀಯ ಗ್ರಂಥಗಳನ್ನು ರಚಿಸಿ ಅನುವಾದಿಸಿ ಖ್ಯಾ ತರಾಗಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ ಶಾಂತಕ್ಕ ಎಂದೇ ಕರೆಯುತ್ತಿದ್ದರು.

ಜೈನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಉಳ್ಳವರಾಗಿದ್ದ ಇವರು ಮಹಾಧವಲ, ಮಡಿಲಕ್ಕಿ ಮತ್ತು ಹಲವಾರು ಜೈನ ಗ್ರಂಥ ರಚನೆ ಮಾಡಿದ್ದಾರೆ.

, ನಾಡಿನದ್ಯಂತ ಇರುವ ಜೈನ ಮಠಗಳಿಗೆ ದಾನ ಧರ್ಮ ಮಾಡಿದ ದಾನ ಚಿಂತಾಮಣಿ ಎಂದೇ ಕರೆಯಿಸಿಕೊಂಡಿದ್ದರು.

ಶ್ರವಣ ಬೆಳಗೊಳ ಜೈನ ಮಠದಿಂದ ಅತ್ಯುನ್ನತ ಗೊಮ್ಮಟೇಶ್ವರ ಪುರಸ್ಕಾರ, ತುಮಕೂರು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತುಮಕೂರು ಜೈನ ಸಮಾಜದಿಂದ ಶೃತ ಪ್ರಭಾವಿಕ ಪ್ರಶಸ್ತಿ, ಔರಂಗಬಾದ್ ನಾ ಡಾ. ಬಾಹುರಾವ್ ಪಾಟೀಲ್ ಸಂಸ್ಥೆಯಿಂದ ಸಮಾಜಸೇವಾ ಪುರಸ್ಕಾರ, ಬ್ರಾಮ್ಮಹಿ ಸುಂದರಿ ಪ್ರಶಸ್ತಿ, ಇವರ ಕರ್ಮ ಕೀರ್ತಿ ಕೃತಿಗೆ ಮೂಡಬಿದರೆ ಜೈನ ಮಠದಿಂದದೇವೇಂದ್ರ ಕೀರ್ತಿ ಪುರಸ್ಕಾರದೊರಕಿದ್ದು ಹಾಗು ಹತ್ತು ಹಲವಾರು ಮಠ ಮನ್ಯಾಗಳಿಂದ ಹಾಗು ಹಲವಾರು ಸಂಸ್ಥೆಗಳಿಂದ ಸನ್ಮಾನಿತಾರಾಗಿದ್ದಾರೆ.


ಶಾಂತಾ ಅವರ ನಿಧನಕ್ಕೆ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜ್, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಕಂಬನಿ ಮಿಡಿದಿದ್ದಾರೆ.


ಸುಮಾರು 50 ವರ್ಷಗಳ ಕಾಲ ನಗರದ ಶ್ರೀ ಪದ್ಮಾಂಬಾ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಹಾಗು ಅತ್ತಿಮಬ್ಬೆ ವಿದ್ಯಾಮಂದಿರದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶ್ರವಣ ಬೆಳಗೊಳದ ಮಠದ ಸ್ವಸ್ಥಿಶ್ರೀಚಾರುಕೀರ್ತಿ ಭಟ್ಟಾರಕರು, ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆಯವಾರ ಮಾತೃಶ್ರೀ ಯಾದ ರತ್ನಮ್ಮ ಹೆಗ್ಗಡೆಯವರಿಗೆ ಹಾಗು ಅವರ ಕುಟುಂಬಕ್ಕೆ ತುಂಬಾ ಹತ್ತಿರದ ಒಡತನವಿತ್ತು ಅದಲ್ಲದೆ ಇವುಗಳನ್ನೆಲ್ಲ ಮೀರಿ ಸಮಾಜ ಸೇವೆಯನ್ನೇ ತಮ್ಮ ಉಸಿರಾಗಿರಿಸಿಕೊಂಡಿದ್ದು ಸಮಾಜದ ಅನೇಕ ಸ್ಥರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ವಾಣಿಜ್ಯದ್ಯೋದ್ಯಮದಲ್ಲೂ ತಮ್ಮನ್ನು ತಾವು ತೊಡಗಿಸಿದ್ದ ಇವರು ಶಾಂತಿನಾಥ ಖಂಡಸಾರಿ ಸಕ್ಕರೆ ಕಾರ್ಖಾನೆ, ಶಾಂತಿನಾಥ ರೈಸ್ ಅಂಡ್ ಆಯಿಲ್ ಮಿಲ್, ಶಾಂತಿನಾಥ ಮೋಟಾರ್ಸ್ ನ ಪಾಲುದಾರರು ಇವರ ಕಂಪನಿಯಲ್ಲಿ ಸಾವಿರಾರು ಜನ ಕಾರ್ಮಿಕರಿಗೆ ಮಾತೃ ಹೃದಯಿಯಾಗಿ ಎಲ್ಲರನ್ನು ಸಲಹುತ್ತಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?