ತುಮಕೂರು ಲೈವ್

SIDDARTHA COLLEGE: ಪರಮೇಶ್ವರ್ ಹೇಳಿದ್ದೇನು?

Publicstory. In


ತುಮಕೂರು: ವಾಣಿಜ್ಯಮತ್ತು ಉದ್ಯಮ ಕ್ಷೇತ್ರದಲ್ಲಿ ಅನೇಕ ಸವಾಲುಗಳಿದ್ದು, ಆಸವಾಲುಗಳಿಗೆ ಕಾರಣಗಳನ್ನು ಹುಡುಕಿ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳಬೇಕಾದ ಸಾಮರ್ಥ್ಯ ಮತ್ತು ಪರಿಣಿತಿ ಪಡೆದುಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ್ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಿಂದ ನೂತನವಾಗಿ ಆರಂಭಿಸಲಾದ ಉದ್ಯಮ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಸಿ ಮಾತನಾಡಿದರು.

ಉದ್ಯಮ ಎನ್ನುವ ಪರಿಕಲ್ಪನೆಯು ಯುವಜನರನ್ನು ಉತ್ತೇಜಿಸುವುದಾಗಿದೆ. ಯುವಮನಸ್ಸುಗಳಲ್ಲಿ ಜೀವನದಲ್ಲಿ ಸಾಧಿಸುವ ಛಲ ಇರಬೇಕು. ನೀವು ಏನು ಮಾಡುತ್ತಿದ್ದಿರಾ ಎಂಬ ಬಗ್ಗೆ ನಿಮಗೆ ಸ್ಪಸ್ಟತೆ ಇರಬೇಕು. ಆಗ ಯುವಜನರು ಉದ್ಯಮವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಕಲಿಕೆಯ ಹಂತದಲ್ಲಿ ಪ್ರಾಕಲ್ಪನೆಗಳನ್ನು ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಆಲೋಚಿಸಿದಾಗ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಶಿಕ್ಷಣ ಎನ್ನುವುದು ಪುಸ್ತಕಕ್ಕೆ ಸೀಮಿತವಾಗದೆ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಐಐಟಿ ಮತ್ತು ಇಡಿ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವಾಕ್ಚಾತುರ್ಯಕ್ಕೆ ಸಹಭಾಗಿಯಾಗಿದೆ. ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಪಡೆಯುವಲ್ಲಿ ಅವಕಾಶವನ್ನು ಕಲ್ಪಿಸುತ್ತದೆ.ಇದರಿಂದ ಉದ್ಯೋಗವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮೈಕ್ರೋ ಎಲೆಕ್ಟ್ರಿಕಲ್ ನಿರ್ದೇಶಕ ಡಾ.ವಿ.ನಾಗರಾಜ್ ಮಾತನಾಡಿ, ಉದ್ಯಮ ಮಾಡುವುದರಿಂದ ಬೇರೆಯವರಿಗೆ ನೀವು ಉದ್ಯೋಗವನ್ನು ನೀಡಿದಂತಾಗುತ್ತದೆ. ಅಂದರೆ ಈ ದೇಶದಲ್ಲಿ ಉದ್ಯಮದಿಂದ ನಿರುದ್ಯೋಗವನ್ನು ಹೊಗಲಾಡಿಸಬಹುದು. ಉದ್ಯಮಗಳಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಯೋಜನೆ ಬಳಸಿಕೊಂಡು ನಿಮ್ಮ ಉದ್ಯೋಗ ಪ್ರಾರಂಭಿಸಬಹುದು. ಅದಕ್ಕೆತಕ್ಕಹಲವಾರು ವೇಧಿಕೆ ಲಭಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ನೇಹ ಮನೋವಿಕಾಸ ಕೇಂದ್ರದ ಡಾ.ಪದ್ಮಾಕ್ಷಿ ಲೋಕೇಶ್, ಸಾಹೆ ವಿಶ್ವವಿದ್ಯಾಲಯದ ಡಾ.ಎಮ್.ಝಡ್.ಕುರಿಯನ್, ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಪವನ್ ಕುಮಾರ ಡೀನ್ಡಾ.ಎಂ.ಸಿದ್ದಪ್ಪ, ರಿಜಿಸ್ಟ್ರಾರ ಡಾ. ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.

Comment here