ತುಮಕೂರು: ತುಮಕೂರು ಲೋಕಸಭಾ ಮತದಾರರು ನನ್ನ ಸ್ಪರ್ಧೆಯನ್ನು ಬಯಸಿದ್ದು, ಬಿಜೆಪಿಯಿಂದ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಕೇಳಿರುವುದಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಲೋಕಸಭಾ ಕ್ಷೇತ್ರದ ಜನರು, ಜಾತಿ ಮತ್ತು ಪಕ್ಷವನ್ನು ಹೊರತು ಪಡಿಸಿಯೂ ಚುನಾವಣೆಗೆ ಸ್ಪರ್ಧೆ ಮಾಡುವಂತೆ ನನಗೆ ತಿಳಿಸಿದ್ದಾರೆ, ಚುನಾವಣೆಗೆ ಜನರ ಭಾವನೆಯನ್ನು ಪರಿಗಣಿಸಲೇ ಬೇಕಾಗುತ್ತದೆ ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲುವಷ್ಟು ದೊಡ್ಡ ಲೀಡರ್ ಅಲ್ಲ ಎಂದು ತಿಳಿಸಿದರು.
ತುಮಕೂರು ಜನತೆ ಜಾತಿ ಮತ್ತು ಪಕ್ಷವನ್ನು ಹೊರತುಪಡಿಸಿ ಮುದ್ಧಹನುಮೇಗೌಡರ ಬಗ್ಗೆ ಒಂದು ಅಪಾರವಾದ ನಂಬಿಕೆ ಇದೆ ಆ ವರ್ಗದ ಜನಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿಯನ್ನು ತಳ್ಳಿಹಾಕಿದ ಅವರು, ನಾನು ಈ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ನೀಡುವುದಿಲ್ಲ, ನಾನು ಬಿಜೆಪಿ ಪಕ್ಷದಲ್ಲಿದ್ದೇನೆ ಇಲ್ಲಿಯೇ ನಾನು ಲೋಕಸಭಾ ಸದಸ್ಯ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಯಾಗಿರುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದು ಜೆಡಿಎಸ್ ಈ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಮೀಸಲಿಟ್ಟರೆ ನೀವು ಜೆಡಿಎಸ್ ಪಕ್ಷ ಸೇರುತ್ತೀರಾ ಎಂಬ ಪ್ರಶ್ನೆಗೆ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ನಮ್ಮ ಬಗ್ಗೆ ವಿಶ್ವಾಸ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ, ನಾನು ಇಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಿದರೆ ಪಕೇತರರಾಗಿ ಆಗಿ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಸ್ವತಂತ್ರವಾಗಿ ಸ್ಪರ್ಧಿಸುವ ಅವಶ್ಯಕತೆ ನನಗಿಲ್ಲ, ಪಕ್ಷವೇ ಟಿಕೆಟ್ ನೀಡುವಾಗ ನಾನು ಸ್ವತಂತ್ರವಾಗಿ ಕೇಳಿದ್ದು ಕೊಡಲಿ ಆ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.
ಜಿಲ್ಲೆಯ ರಾಜಕೀಯದ ಬಗ್ಗೆ ಮಾತನಾಡಲು ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರ ಬಳಿ ಸಮಯ ಕೇಳಿರುವುದಾಗಿ ತಿಳಿಸಿದರು.