ಜನಮನ

ಸುರೇಶಗೌಡರೇ ಎಂ ಎಲ್ಎ- ಹೂವು ನೀಡಿದ ದೇವರು: ಕಾರದ ಮಠದ ಶ್ರೀ ಘೋಷಣೆ

ಕುಚ್ಚಂಗಿಪಾಳ್ಯ: ಸುರೇಶಗೌಡರೇ ಮುಂದಿನ ಶಾಸಕರಾಗಿ ಆಯ್ಕೆಯಾಗುವುದು ಖಚಿತ. ನಾನು ಸಂಕಲ್ಪ ಮಾಡುತ್ತಿದಂತೆ ಕುಚ್ಚಂಗಿಯಮ್ಮ ಬಲಭಾಗದಲ್ಲಿ ಹೂ ಕೊಟ್ಟಿದೆ. ಅದನ್ನೆಲ್ಲ ನೀವೇ ನೋಡಿದಿರಲ್ಲ ಎಂದು ಬೆಳ್ಳಾವಿ ಕಾರದ ಮಠದ ವೀರ ಬಸವ ಸ್ವಾಮೀಜಿ ಹೇಳಿದರು.

ಇಲ್ಲಿ‌ನ ಕುಚ್ಚಂಗಿ ಪಾಳ್ಯದಲ್ಲಿ ಕುಚ್ಚಂಗಿಯಮ್ಮನ ಪೌರ್ಣಮಿ ಪೂಜಾ ಕಾರ್ಯಕ್ರಮದಲ್ಲಿ ದೇವಿ ಸಂಕಲ್ಪದಲ್ಲಿ ಬಲಭಾಗದಲ್ಲಿ ಹೂ ಆಗಿದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಒಳ್ಳೆಯ ನಾಯಕರು ಬರಬೇಕು. ಒಳ್ಳೆಯವರನ್ನು ಆಯ್ಕೆ ಮಾಡಬೇಕು. ದೇವಿಯ ಸಂಕಲ್ಪವನ್ನು ನೀವುಗಳೇ ಕಣ್ಣಾರೆ ಕಂಡಿರಿ. ಇನ್ನು ಹೆಚ್ಚು ಹೇಳಬೇಕಾಗಿಲ್ಲ ಎಂದರು.

ಮಾಜಿ ಶಾಸಕ ಬಿ.ಸುರೇಶಗೌಡರು ಪೂಜೆ, ಹೋಮ ನಡೆಸಿಕೊಟ್ಟರು. ಬಳಿಕ ಮಾತನಾಡಿ, ದೇವಿಗೆ 5 ಕೆಜಿ ಬೆಳ್ಳಿ ಕೊಡಿಸುವೆ ಎಂದರು.

ನನ್ನನ್ನು ಗೆಲ್ಲಿಸಿದರೆ ₹ 1 ಕೋಟಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಗ್ರಾನೈಟ್, ಸಮುದಾಯಭವನ ನಿರ್ಮಿಸಿಕೊಡುವೆ. ಊರಿಗೆ ಡಾಂಬರು ರಸ್ತೆ ಮಾಡಿ ಕೊಡುವೆ ಎಂದು ಭರವಸೆ ನೀಡಿದರು.

ಸುಮಾರು ಎರಡು ಸಾವಿರ ಭಕ್ತರು,ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅರೆಕೆರೆ ಗ್ರಾ.ಪಂ. ಅಧ್ಯಕ್ಷ ರವೀಶ್, ಸೋರೆಕುಂಟೆಯ ಅಧ್ಯಕ್ಷ ಜಗದೀಶ್, ನೆಟ್ಟಗಾನಹಳ್ಳಿ ಅಧ್ಯಕ್ಷ ರಾಮಣ್ಣ, ಅಣ್ಣೇನಹಳ್ಳಿಯ ಶಿವಣ್ಣ, ಊರುಕೆರೆಯ ಸದಸ್ಯ ಶಿವಕುಮಾರ್ ಸಹಿತ ಸುತ್ತಮುತ್ತಲ ಗ್ರಾಮ ಪಂಚಾಯತಿ ಗಳ ಸದಸ್ಯರು, ಗ್ರಾಮದ ಮುಖಂಡರು ಸೇರಿದ್ದರು.

Comment here