ಗುಬ್ಬಿ : ನಾಲ್ಕು ಗೋಡೆಗಳ ಮದ್ಯೆ ಪಡೆಯುವ ಶಿಕ್ಷಣಕಿಂತ ಹೊರಗಡೆ ಪಡೆಯುವ ಶಿಕ್ಷಣ ಜೀವನದಲ್ಲಿ ಹೆಚ್ಚು ಕೌಶಲ್ಯ ವನ್ನು ಕಲಿಸುತ್ತದೆ ಎಂದು ಬೆಟ್ಟದಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ಪಟ್ಟಣದ ಸರ್ಕಾರಿ ಹಿರಿಯ ಬಾಲಕರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರಿಗೆ ವಿಶೇಷ ಜ್ಞಾನ ಇರಬೇಕು, ಖಾಸಗಿಯಾದರು ಸರಿ, ಸರ್ಕಾರಿ ಆದರು ಸರಿ ಉತ್ತಮ ವಿದ್ಯೆ ಕಲಿತರೆ ಉತ್ತಮ ಸ್ಥಾನಮಾನ ಪಡೆಯಬಹುದು ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಜಿ.ಎನ್ ಅಣ್ಣಪ್ಪಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ವ್ಯಕ್ತಿಗಳು ಉನ್ನತ ಹುದ್ದೆ ಅಲಂಕರಿಸಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಪಪಂ ಸದಸ್ಯ ಶಶಿಕುಮಾರ್, ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಜಿ.ಎನ್ ಬೆಟ್ಟಸ್ಚಾಮಿ, ದಿಲೀಪ್,ಜೆಡಿಎಸ್ ಮುಂಖಂಡ ಬಿಎಸ್ ನಾಗರಾಜು, ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಶ್ , ವೈದ್ಯ ನಾಗಭೂಷಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಶಂಕರ್ ಕುಮಾರ್, ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ, ಎಸ್‌ಟಿಎಂಸಿ ಸದಸ್ಯರು, ಪದಾಧಿಕಾರಿಗಳು ಪೋಷಕರು ಇತರರು ಇದ್ದರು