ತುಮಕೂರು ಲೈವ್

Tumkur city: ಇನ್ನೂ 24×7 ಕುಡಿಯುವ ನೀರು: ಶಾಸಕ ಜ್ಯೋತಿಗಣೇಶ್

Publicstory. in


Tumkur: ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ ಮುವತ್ತೇಳು ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜ್ಯೋತಿಗಣೇಶ್ ಇನ್ನುಳಿದ ಐದು ಹೆಡ್ ಟ್ಯಾಂಕ್ ಗಳು ನಿರ್ಮಾಣ ಹಂತದಲ್ಲಿವೆ. ಮತ್ತೆ ಎರಡು ಹೆಡ್ ಟ್ಯಾಂಕ್ ಗಳ ನಿರ್ಮಾಣಕ್ಕೆ ಜಾಗಕ್ಕಾಗಿ ಹುಡುಕಾಟ ಆರಂಭವಾಗಿದೆ ಎಂದು ತಿಳಿಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರ ಲೀಟರ್ ನೀರು ಬಳಕೆಗೆ 8 ರೂಪಾಯಿ ನಿಗದಿಯಾಗಬಹುದು. ನೀರು ಪೂರೈಕೆ ಮಾಡುವಾಗ ಜನರ ಬಳಕೆಗೆ, ಸೆಮಿ ಕಮರ್ಷಿಯಲ್ ಮತ್ತು ಕಮರ್ಷಿಯಲ್ ಎಂದು ಮೂರು ಪಟ್ಟು ತೆರಿಗೆ ವಿಧಿಸಬಹುದು ಎಂದರು.

ತುಮಕೂರು ನಗರಕ್ಕೆ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸುವ ನೀರನ್ನು ಕುಡಿಯಲು ಅವಲಂಬಿಸಲಾಗುವುದು. ಹೆಬ್ಬಾಕ ಕೆರೆಯಲ್ಲಿನ ನೀರನ್ನು ಕೈಗಾರಿಕಾ ಉದ್ದೇಶಕ್ಕೆ ನೀಡುತ್ತೇವೆ ಎಂದು ವಿವರಿಸಿದರು.

ತುಮಕೂರು ಅಮಾನಿಕೆರೆಯಲ್ಲಿ ನಾಲ್ಕು ಕಂಪಾರ್ಟ್ ಮೆಂಟ್ ಮಾಡಿಕೊಂಡು ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟಿಸಿಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಲವು ಬಡಾವಣೆಗಳಲ್ಲಿ ಕೆಲಸಗಲು ನಡೆಯುತ್ತಿವೆ. ಕೆಲವು ಕಡೆ ಪೂರ್ಣಗೊಂಡಿವೆ ಎಂದು ಹೇಳಿದರು.

200 ಕೋಟಿ ರೂಪಾಯಿ ವೆಚ್ಚದಲ್ಲಿ 24×7 ನೀರು ಪೂರೈಕೆ ಯೋಜನೆ ಜಾರಿಯಾಗಲಿದೆ. ಆರ್.ಒ ಪ್ಲಾಂಟ್ ಖಾಲಿಯಾಗಿದ್ದು ಮತ್ತಷ್ಟು ತರಿಸಿಕೊಳ್ಳಲಾಗುವುದು ಎಂದರು.

ನಗರದಲ್ಲಿ ಆಸ್ತಿಯ ಭೌಗೋಳಿಕ ಸರ್ವೆಗೆ ಸರ್ಕಾರ ಒಪ್ಪಿಗೆ ನೀಡಿದ್ದು , ಎಲ್ಲರ ಆಸ್ತಿಯ ವಿಸ್ತೀರ್ಣ ನಿಖರವಾಗಿ ತಿಳಿಯಲಿದೆ. ಹೀಗಾಗಿ ಪಾಲಿಕೆಗೂ ಆದಾಯ ಬರಲಿದೆ ಎಂದರು.

ಅಂಗನವಾಡಿ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಮೀಸಲಿಟ್ಟಿದ್ದು ಅವು ಶಾಲೆಯ ಆವರಣದಲ್ಲಿಯೇ ಇರಲಿವೆ. ಸಂತೆಗೆ ಜಾಗ ಮಾಡಿಕೊಡಲಾಗುವುದು ಎಂದು ಹೇಳಿದರು.

ಆರು ತಿಂಗಳಲ್ಲಿ ಯೋಜನೆ ಸಕಾರವಾಗಲಿದೆ. ನಗರವಾಸಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Comment here