Publicstory
ತುಮಕೂರು; ತುಮಕೂರು ವಿ.ವಿ. ಕುಲ ಸಚಿವ ಶಿವಚಿತ್ತಪ್ಪ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.
ಕುಲ ಸಚಿವ ಸ್ಥಾನಕ್ಕೆ ಸರ್ಕಾರ ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ಶಿವಚಿತ್ತಪ್ಪ ಟೀಕಿಸಿದ್ದರು.
ಮಹಿಳಾ ಕುಲಸಚಿವರು ಇಲ್ಲಿಗೆ ಬಂದು ಪಹಣಿ ಕೊಡಬಹುದು ಎಂದು ವಿ.ವಿ.ಯಲ್ಲಿ ನಡೆದ ಮಹಿಳಾಗೋಷ್ಠಿ ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ್ದರು.
ಶಿವಚಿತ್ತಪ್ಪ ಮಾತುಗಳು ತೀವ್ರ ಟೀಕೆಗೆ ಒಳಗಾಗಿತ್ತು. ಕರ್ನಾಟಕ ಕೆ ಎ ಎಸ್ ಅಧಿಕಾರಿಗಳ ಸಂಘ ಖಂಡಿಸಿ ಶಿವ ಚಿತ್ತಪ್ಪ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿತ್ತು.
ನಾಡಿನ ಅನೇಕ ಹಿರಿಯ ಸಾಹಿತಿಗಳು, ಮಹಿಳಾ ಹೋರಾಟಗಾರರು ಸಹ ಟೀಕಿಸಿದ್ದರು. ಒತ್ತಡಕ್ಕೆ ಸಿಲುಕಿದ ಸರ್ಕಾರ ರಾಜೀನಾಮೆ ಪಡೆದಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಅವಧಿ ಮುಗಿದ ಬಳಿಕ ಕುಲ ಸಚಿವರು ಹೊಸಬರಿಗೆ ಅಧಿಕಾರ ಹಸ್ತಾಂತರಿಸಿ ಅವರ ಮೂಲ ವಿ.ವಿಗೆ ಮರಳಿ ಹೋಗುವುದು ವಾಡಿಕೆಯಾಗಿದೆ.
ಅಧಿಕಾರ ಹಸ್ತಾಂತರಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.