ಪಾವಗಡ : ತಾಲ್ಲೂಕಿನ ಕೆಲವು ಕಿಡಿಗೇಡಿ ವ್ಯಕ್ತಿಗಳು ಯಾದವ ಸಮುದಾಯ ಕಾಂಗ್ರೆಸ್ ಪರವಿಲ್ಲ,ವೆಂಕಟೇಶ್ ಪರವಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ.ವೆಂಕಟರಮಣಪ್ಪ ಯಾದವ ಸಮುದಾಯಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಬಾರಿ ನನ್ನನ್ನು ಆಶೀರ್ವದಿಸಿ ವಿಧಾನಸೌಧಕ್ಕೆ ಕಳಿಸಿದೀರಾ ಅದೇ ರೀತಿ ನನ್ನ ಮಗ ವೆಂಕಟೇಶ್ ಗೆಲ್ಲುವಿಗೆ ಸಮುದಾಯ ಶ್ರಮಿಸಬೇಕು ಎಂದು ಮಾಜಿ ಸಚಿವ ವೆಂಕಟರಮಣಪ್ಪ ಕರೆ ನೀಡಿದರು.
ಪಾವಗಡ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ನಡೆದ ಯಾದವ ಸಮುದಾಯದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ನುಡಿದಂತೆ ನಡೆಯುವವನ್ನು ನಾನು,ಅದೇ ರೀತಿ ಯಾದವ ಸಮುದಾಯವೂ ಮಾತು ಕೊಟ್ಟು, ಮಾತಿಗೆ ತಪ್ಪಿಲ್ಲ ನಿಮ್ಮ ಆಶಿರ್ವಾದ ದಿಂದ ನಾಲ್ಕು ಬಾರಿ ಶಾಸಕ ಎರಡು ಬಾರಿ ಮಂತ್ರಿ ಯಾಗಿದೇನೆ .ನನಗೆ ಆಶಿರ್ವಾದ ನೀಡಿದಂತೆ ಮುಂದಿನ ತಿಂಗಳು ಮೇ ಹತ್ತರಂದು ನಡೆಯುವ ಚುನಾವಣೆಯಲ್ಲಿ ಹೆಚ್ ವಿ ವೆಂಕಟೇಶ್ ಗೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದ ವೆಂಕಟರಮಣಪ್ಪ ಯಾದವ ಸಮಾಜದ ಹಿತ ಕಾಪಡುವುದೆ ನನ್ನ ಪರಮಗುರಿ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮಾತನಾಡುತ್ತಾ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಪಾವಗಡದಲ್ಲೂ ಉತ್ಸಾಹಿ ಯುವನಾಯಕ ಹೆಚ್ ವಿ ವೆಂಕಟೇಶ್ ರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡುವಂತೆ ಕೋರಿದರು.
ಯಾದವ ಸಮುದಾಯದ ಮುಖಂಡರಾದ ಜಿ ಜೆ ರಾಜಣ್ಣ,ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಮಾಜಿ ಜಿ ಪಂ ಸದಸ್ಯರಾದ ಕೋಟೆ ಪ್ರಭಾಕರ್,ಪಾಪಣ್ಣ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ನರಸಿಂಹಪ್ಪ ಮಾತನಾಡಿದರು.
ಕುರುಬರ ಸಂಘದ ಅಧ್ಯಕ್ಷ ರಾದ ಮೈಲಪ್ಪ, ಮಾನಂ ವೆಂಕಟಸ್ವಾಮಿ ರೈತ ಸಂಘದ ಮುಖಂಡ ನರಸಿಂಹ ರೆಡ್ಡಿ, ಮಾಜಿ ಶಾಸಕ ಉಗ್ರ ನರಸಿಂಹಪ್ಪ, ಯುವ ಕಾಂಗ್ರೆಸ್ ನ ದಿವ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಮಹಿಳಾ ಮುಖಂಡರಾದ ಸುಮ್ಮ ಅನಿಲ್ ಕುಮಾರ್, ಉಷಾ ರಾಣಿ, ಜಯಲಕ್ಷ್ಮೀಮ್ಮ ಮತ್ತಿತರರು ಹಾಜರಿದ್ದರು.
Box
ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಮಾತನಾಡುತ್ತಾ ಹಿತ್ತ ಶತ್ರುಗಳ ಕಾಟ ಹೆಚ್ಚಾಗಿದೆ ಅವರ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ ಯಾದವ ಜನಾಂಗದ ಪ್ರೀತಿ ವಿಶ್ವಾಸ ಕ್ಕೆ ದಕ್ಕೆಯಾಗದಂತೆ ನಾನು ನನ್ನ ತಂದೆ ಕೆಲಸ ಮಾಡಿದ್ದೇವೆ ಪ್ರತಿ ಗೊಲ್ಲರಹಟ್ಟಿಯ ಜನ ನಮ್ಮನ್ನು ಸಹೋದರಂತೆ ನೋಡಿದೆ. ಪ್ರತಿಬಾರಿಯಂತೆ ಯಾದವ ಸಮುದಾಯ ಮತ ನೀಡಿ ಆಶೀರ್ವದಿಸುವಂತೆ ಕೋರಿದ ವೆಂಕಟೇಶ್. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿನ ಗೃಹಲಕ್ಷ್ಮೀ,ಅನ್ನಭಾಗ್ಯ,200 ಯುನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು.