ನಮ್ಮೂರು

ಅಬ್ಬಬ್ಬಾ! ಕೊರಟಗೆರೆ ಪೊಲೀಸ್ ಠಾಣೇಲಿ ಕಳ್ಳರ ಕೂಯ್ಲು ಅಷ್ಟೇ ಅಲ್ಲ ಮಳೆ ಕೂಯ್ಲೂ ಇದೆ…

Publicstory. in


ಕೊರಟಗೆರೆ: ತಾಲ್ಲೂಕಿನ ಜನರ ಬಹಳ ದಿನಗಳ‌ ನಿರೀಕ್ಷೆ ಕೊರಟಗೆರೆ ಪೊಲೀಸ್ ಠಾಣೆ ಕಟ್ಟಡ ಜೂ.10 ಲೋಕಾರ್ಪಣೆಗೆ ಸಿದ್ಧ ಗೊಂಡಿದೆ.

 

ಸುಮಾರು 80 ವರ್ಷ ಹಳೆಯ ಕಟ್ಟಡದಲ್ಲಿದ್ದ ಪೊಲೀಸ್ ಠಾಣೆ ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈಗ ಅದೇ ಜಾಗದಲ್ಲಿ ₹.1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಗಣ್ಯರಿಂದ ಉದ್ಘಾಟನೆಗೆ ಸಿದ್ಧಗೊಂಡಿದೆ.

ಇದರೊಂದಿಗೆ ಇಲ್ಲಿನ ಸಿಬ್ಬಂದಿಗಾಗಿ ₹2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳು ಕೂಡ ಉದ್ಘಾಟನೆಯಾಗಲಿವೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್

 

ಸಮಿಶ್ರ ಸರ್ಕಾರದ ಅವದಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಅವರ ಕೊಡುಗೆಯಾಗಿ ಪಟ್ಟಣ ಸೇರಿದಂತೆ ಕೋಳಾಲ ಪೊಲೀಸ್ ಠಾಣೆಗಳು ಅನುಮೋದನೆಗೊಂಡು ಕೆಲವೇ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿವೆ.


ಇವರು ಅತ್ಯಂತ ಜನಪ್ರಿಯರು

ಇಲ್ಲಿನ ಠಾಣೆಯ ಇತಿಹಾಸವನ್ನು ನೋಡಿದಾಗ ಹಲವು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ.

ಅತ್ಯಂತ ಜನಾನುರಾಗಿಯಾಗಿ, ಜನ ಸ್ನೇಹಿಯಾಗಿ ಜನಪ್ರಿಯರಾದವರು ಸಿಪಿಐ ಚಂದ್ರಶೇಖರ್.

ತಾಲ್ಲೂಕಿನ ಯಾವ ಗ್ರಾಮಕ್ಕೆ ಹೋದರು ಜನರು ಇವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ.

ದಕ್ಷ ಅಧಿಕಾರಿಯಾಗಿದ್ದ ಇವರು ಪಟ್ಟಣಕ್ಕೆ ಬಂದಿದ್ದ ಚಿರತೆ ಪತ್ರಕರ್ತರೊಬ್ಬರ ಮೇಲೆ ಎರಗುವಾಗ ಪ್ರಾಣದ ಹಂಗು ತೊರೆದು ಜೀವಂತ ಸೆರೆ ಹಿಡಿಯುವ ಮೂಲಕ ಮನೆ ಮಾತಾಗಿದ್ದರು.

ಹಲವು ಮಹತ್ವದ ಪ್ರಕರಣಗಳನ್ನು ಬೇಧಿಸಿದ್ದ ಅವರು, ಜನ ಸ್ನೇಹಿಗೂ ಹೆಸರಾಗಿದ್ದರು.

ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸಿದ ಪ್ರಕರಣದಲ್ಲಿ ಅವರಿಗೆ ಇಲಾಖೆಯಲ್ಲಿ ಉತ್ತಮ ಹೆಸರಿದೆ.

ಈಗ ಇರುವ ಅಧಿಕಾರಿಗಳು ಸಹ ಜನಸ್ನೇಹಿಯಾಗಿದ್ದಾರೆ ಎನ್ನುತ್ತಾರೆ ಹಲವು ಮುಖಂಡರು ಹಾಗೂ ಜನರು.


ಪೊಲೀಸ್ ಇಲಾಖೆಯ ಆಧುನಿಕರಣ ಯೋಜನೆಯಡಿ ₹. 1.50 ಕೋಟಿ ವೆಚ್ಚದಲ್ಲಿ ಕೊರಟಗೆರೆ ಠಾಣೆ ಕಟ್ಟಡ ಮತ್ತು ಪೊಲೀಸ್ ಇಲಾಖೆಯ 2020-ಗೃಹ ಯೋಜನೆಯಡಿ ₹.2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳನ್ನು ನಿರ್ಮಿಸಲಾಗಿದೆ‌.

ಡಾ.ಕೆ.ವಂಶಿಕೃಷ್ಣ, ಎಸ್ಪಿ ತುಮಕೂರು

2017-18ನೇ ಸಾಲಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದಿಂದ ಮುಂಜೂರು ಮಾಡಿದ್ದರು.

ಬಹಳ ವರ್ಷಗಳಿಂದ ಇಡೀ ತಾಲ್ಲೂಕಿಗೆ ಒಂದೇ ಒಂದು ಪೊಲೀಸ್ ಠಾಣೆ ಇತ್ತು. ಒಂದು ಠಾಣೆ ವ್ಯಾಪ್ತಿಗೆ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿದ್ದವು.


ಎಫ್.ಕೆ.ನದಾಫ್, ಸಿಪಿಐ
ನೂತನ ಠಾಣೆಯಲ್ಲಿ ಒಳಾಂಗಣ, ಸಬ್ ಇನ್ಸ್ ಪೆಕ್ಟರ್, ಸಹಾಯಕ ಸಬ್ ಇನ್ಸ್ ಪೆಕ್ಟರ್, ತನಿಖಾ ಸಹಾಯಕ ತಾಂತ್ರಿಕ ವಿಭಾಗ, ನಿಸ್ತಂತು ವಿಭಾಗ, ಪುರುಷರ ಬಂಧಿಖಾನೆ, ಮಹಿಳೆಯರ ಬಂಧಿಖಾನೆ, ಠಾಣಾ ಬರಹಗಾರ, ಸ್ವಾಗತಗಾರ ಮತ್ತು ಮಹಡಿಯಲ್ಲಿ ಮಹಿಳೆ ಮತ್ತು ಪುರುಷರ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಉಗ್ರಾಣ ಕೊಠಡಿ, ಸುಸಜ್ಜಿತ ಶೌಚಾಲಯ ಮತ್ತು ವಿಶಾಲವಾದ ಆವರಣದಲ್ಲಿ ಹತ್ತಾರು ಬಗೆಯ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಎಫ್.ಕೆ. ನಧಾಫ್, ಸಿಪಿಐ


ಎಚ್.ಮುತ್ತುರಾಜು, ಸಿಪಿಐ
ಕಟ್ಟಡದ ಮೇಲ್ಚಾವಣಿಯ ಮಳೆನೀರು ವ್ಯರ್ಥ ಆಗದಂತೆ ಮಳೆಕೊಯ್ಲು ಯೋಜನೆಯಡಿ ಎರಡು ಕಡೆ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಬಸತಿ ಗೃಹ ಕೊಠಡಿಗಳ ಅಂಕಣಕ್ಕೆ ತಾಲ್ಲೂಕಿನ ಪ್ರಸಿದ್ದ ನದಿ ಜಯಮಂಗಲಿ ನದಿ ಹೆಸರನ್ನು ಇಡಲಾಗಿದೆ. –ಎಚ್.ಮುತ್ತುರಾಜು, ಪಿಎಸ್ಐ

Comment here