ಜಸ್ಟ್ ನ್ಯೂಸ್

ಆರೋಗ್ಯ ತಪಾಸಣಾ ಶಿಬಿರ

ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಭಾರತೀಯ ವೈದ್ಯಕೀಯ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಮೂತ್ರಪಿಂಡ, ಕ್ಯಾನ್ಸರ್, ಲೈಂಗಿಕ ರೋಗಗಳ ತಪಾಸಣೆ, ಸ್ತ್ರೀ ರೋಗ ಖಾಯಿಲೆ, ಮಾನಸಿಕ ಕಾಯಿಲೆ, ಕ್ಷಯರೋಗ ತಪಾಸಣೆ ಇನ್ನಿತರೆ ಕಾಯಿಲೆಗಳ ಬಗ್ಗೆ ಸೂಕ್ತ ಆಪ್ತಸಮಾಲೋಚನೆ ಮತ್ತು ತಪಾಸಣೆ ನಡೆಸಲಾಯಿತು.

ಜಿಲ್ಲಾಪಂಚಾಯಿತಿ ಸದಸ್ಯೆ ಗೌರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ನಾಗರಾಜ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಮಹಬೂಬ್ ಸಾಬ್, ವೈದ್ಯಾಧಿಕಾರಿ ಡಾ.ಕಿರಣ್, ಡಾ.ಲಿಂಗರಾಜು, ಪಿಡಿಓ ತಿಪ್ಪಯ್ಯ, ಗ್ರಾ.ಪಂ ಸದಸ್ಯ ತಿಪ್ಪೇಸ್ವಾಮಿ, ನಾಗರಾಜು, ಆಪ್ತಸಮಾಲೋಚಕ ಹರೀಶ್, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.

Comment here