ತುಮಕೂರ್ ಲೈವ್

ಕಲಾವಿದ ಮೂಡ್ಲಗಿರಿಯಪ್ಪಗೆ ಬೆಳ್ಳಿ ಕಿರೀಟ

ತುಮಕೂರು:
ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದ ಹಿರಿಯ ಕಲಾವಿದ ಮೂಡ್ಲಗಿರಿಯಪ್ಪ ಅವರಿಗೆ ಸ್ಥಳೀಯ ಮಾರುತಿ ಕಲಾ ಸಂಘದ ವತಿಯಿಂದ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಯಿತು.

ಕೊರಟಗೆರೆಯ ಶಿವಗಂಗಾ ಕಲ್ಯಾಣಮಂಟಪದಲ್ಲಿ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಬೆಳಿ ಕಿರೀಟ ನೀಡಿ ಗೌರವಿಸಿದರು. ನಾಟಕದಲ್ಲಿ ಅಭಿಮನ್ಯು ಪಾತ್ರವನ್ನು ಮೂಡ್ಲಗಿರಿಯಪ್ಪ ಅವರು ಅಭಿನಯಿಸಿ ಜನಮನ ಸೆಳೆದರು. ವಿದ್ಯುತ್ ಗುತ್ತಿಗೆದಾರರಾಗಿರುವ ಮೂಡ್ಲಗಿರಿಯಪ್ಪ ಹಲವು ವರ್ಷಗಳಿಂದ ವಿವಿಧ ಪೌರಾಣಿಕ ನಾಟಕದಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸುತ್ತಾ ಬಂದಿದ್ದಾರೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ ಕೂಡ ಲಭಿಸಿದೆ. ಹಿರಿಯ ಕಲಾವಿದರಾದ ಅವರನ್ನು ವಿದ್ಯುತ್ ಗುತ್ತಿಗೆ ದಾರರ ಸಂಘ, ಕನ್ನಡ ಮತ್ತು ಸಂಸ್ಕರತಿ ಇಲಾಖೆ, ಹಾಗೂ ಕೊರಟಗೆರೆ ತಾಲ್ಲೂಕಿನ ಮಾರುತಿ ಕಲಾ ಸಂಘ ಗುರುತಿಸಿ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅರಕೆರೆಶಂಕರ್, ಮೆಡಿಕಲ್ ಅಶ್ವತ್ಥ್, ಬೆಸ್ಕಂ ಇಲಾಖೆ ಎಇಇ ಮಲ್ಲಯ್ಯ, ಎಇ ಪ್ರಸನ್ನಕುಮಾರ್, ಪುಟ್ಟಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಣ್ಣ, ವಕೀಲ ಟಿ.ಕೃಷ್ಣಮೂರ್ತಿ, ಮುಖಂಡರಾದ ಮಂಜುನಾಥ, ಲಕ್ಷ್ಮಿನಾರಾಯಣ್, ಗಟ್ಲಹಳ್ಳಿ ಕುಮಾರ್, ಶಿವರಾಮು, ಮೈಲಾರಪ್ಪ, ಅಶ್ವತ್ಥನಾರಾಯಣರಾಜು, ಮಲ್ಲಯ್ಯ, ಶ್ರೀನಿವಾಸ್ ಇತರರು ಇದ್ದರು.

Comment here