ಜಸ್ಟ್ ನ್ಯೂಸ್

ಕಳಪೆ ಬಿತ್ತನೆ ಶೇಂಗಾ ವಿತರಣೆ ಆರೋಪ

ಪಾವಗಡ: ಕಳಪೆ ಬಿತ್ತನೆ ಶೇಂಗಾ ವಿತರಿಸಿರುವವರ  ವಿರುದ್ಧ ಕ್ರಮ ಜರುಗಿಸಬೇಕು ಎಂದುತ್ತಾಯಿಸಿ ತಾಲ್ಲೂಕು ರೈತ ಸಂಘದೊಂದಿಗೆ ಚಿಕ್ಕಹಳ್ಳಿ ದಿನ್ನೆ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪಟ್ಟಣದ  ಮಾರುತಿ ಟ್ರೇಡಿಂಗ್ ಕಂಪನಿಯಿಂದ  ಸುಮಾರು 15 ಕ್ವಿಂಟಾಲ್ ನಷ್ಟು ಶೇಂಗಾ ಬೀಜ ಕೊಂಡು ಬಿತ್ತನೆ ಮಾಡಲಾಗಿದೆ. 20 ದಿನಗಳು ಕಳೆದರೂ ಈ ವರೆಗೆ ಮೊಳಕೆ ಬಂದಿಲ್ಲ. ಇದರಿಂದ ಸಾಕಷ್ಟು ನಷ್ಟವಾಗಿದೆ   ಎಂದು ಚಿಕ್ಕಹಳ್ಳಿ ದಿನ್ನೆ ರೈತರು ಆರೋಪಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ,   ಕೆಲ ಟ್ರೇಡರ್ಸ್ ಮಾಲೀಕರು  ಗುಜರಾತ್ ಸೇರಿದಂತೆ ವಿವಿದೆಡೆಗಳಿಂದ ಶೇಂಗಾ ಆಮದು ಮಾಡಿಕೊಂಡು, ನೀರು ಹಾಕಿ  ಹೆಚ್ಚಿನ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇವರಿಂದ  ಶೇಂಗಾ ಕೊಂಡು ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ದೂರಿದರು.

ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ನಷ್ಟ ಪರಿಹಾರ ಕೊಡಿಸಿಕೊಡಬೇಕು. ತಾಲ್ಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಎಣ್ಣೆಗಾಗಿ, ತಿನ್ನಲು ಶೇಂಗಾ ಮಾರಾಟ ಮಾಡಲಾಗುತ್ತಿದೆಬಿತ್ತನೆ ಉದ್ದೇಶಕ್ಕೆ ಶೇಂಗಾ ಮಾರಾಟ ಮಾಡಿಲ್ಲ ಎಂದು ಮಾರುತಿ ಟ್ರೇಡಿಂಗ್ ಕಂಪನಿ ಮಾಲೀಕ ಅನಿಲ್ ಕುಮಾರ್ ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದರು.

ತಾಲ್ಲೂಕು ರೈತ ಸಂಘದ ಪದಾಧಿಕಾರಿ  ಬಡಪ್ಪ, ಕೃಷ್ಣಾರೆಡ್ಡಿ, ರೈತ ಗೋವಿಂದಪ್ಪ, ಸತೀಶ್, ಶೇಖರ್, ಕೃಷ್ಣಪ್ಪ, ರಾಮು, ಅಂಜಿನಪ್ಪ, ರಾಮಪ್ಪ ಉಪಸ್ಥಿತರಿದ್ದರು.

Comment here