ಜಸ್ಟ್ ನ್ಯೂಸ್

ಕಾನ್ ಸ್ಟೆಬಲ್ ನಿಂದನೆ : ಗ್ರಾಮಸ್ಥರು ಮಾಡಿದ್ದೇನು?

Public Story ವೈ.ಎನ್.ಹೊಸಕೋಟೆ:‌ ಹೋಬಳಿಯ ಓಬಳಾಪುರದಲ್ಲಿ ಭಾನುವಾರದಂದು ಗ್ರಾಮಸ್ಥರನ್ನು ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿದ ಗ್ರಾಮ ಠಾಣೆಯ ಗುಪ್ತ  ಮಾಹಿತಿ ಕಾನ್‌ ಸ್ಟೆಬಲ್   ವಿರುದ್ಧ ಗ್ರಾಮದ ಮಹಿಳೆಯರು ಪೋಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಕಾನ್‌ ಸ್ಟೆಬಲ್‌   ಗ್ರಾಮಸ್ಥರೊಂದಿಗೆ  ಅಸಭ್ಯವಾಗಿ ಮಾತನಾಡಿದ್ದಾರೆ. ನೀವೇನಾದರು ಮುಂದುವರೆಸಿದರೆ   ಬೂಟಿನಲ್ಲಿ ಹೊಡೆಯುತ್ತೇನೆ ಎಂದು ನಿಂದಿಸಿದ್ದಾರೆ.

    ಅವರ ಮಾತಿನಿಂದ ರೊಜ್ಜಿಗೆದ್ದ ಜನತೆ ಗ್ರಾಮದ ಎಲ್ಲರೂ ಅಡ್ಡ ಬರುತ್ತಾರೆ ಅವರನ್ನೆಲ್ಲಾ ಬೂಟಿನಲ್ಲಿ ಹೊಡೆಯುತ್ತೀಯ ಎಂದು ಕೇಳಿದ್ದಕ್ಕೆ ಗ್ರಾಮದ ಎಲ್ಲರನ್ನೂ ಬೂಟಿನಲ್ಲಿ ಒದೆಯುತ್ತೇನೆ ಎಂದು ದರ್ಪದಿಂದ ಮಾತನಾಡಿ ಜನರನ್ನು ಮತ್ತಷ್ಟು ಕೆರಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ  ಗ್ರಾಮಸ್ಥರು ಎಲ್ಲರನ್ನೂ ಬೂಟಿನಿಂದ ಹೊದ್ದು ಇಲ್ಲಿಂದ ಹೋಗಬೇಕು ಎಂದು ಪೋಲೀಸ್ ವಾಹನಕ್ಕೆ ಅಡ್ಡ ಹಾಕಿ ಧರಣಿ ಕುಳಿತಿದ್ದಾರೆ.

ಓಬಳಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆಯ ಸ್ಥಳದಲ್ಲಿ ಗ್ರಾಮದ ಯುವಕರು ಕೆಲಸ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಮತ್ತೊಂದು ಕೋಮಿನವರು ಈ ಸ್ಥಳವು ತಮಗೆ ಸೇರಿದ್ದು ಇಲ್ಲಿ ಯಾವುದೇ ರೀತಿಯ ಕಾಮಗಾರಿ ಮಾಡಬಾರದು ಎಂದು ತಡೆದಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

     ಸ್ಥಳಕ್ಕೆ ಬೇಟಿ ನೀಡಿದ ವೃತ್ತನಿರೀಕ್ಷಕ ಪೇದೆಯ ವರ್ತನೆಗೆ  ಕ್ಷಮೆ ಕೋರಿದ ನಂತರ ಜನತೆಯು ಅತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಡಿವೈಎಸ್ಪಿ ಪ್ರವೀಣ್‌  ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದರು.    ಸ್ಥಳದ ವಿಚಾರವಾಗಿ ಚರ್ಚಿಸಿ ತೀರ್ಮಾನ  ತೆಗೆದುಕೊಳ್ಳುವ ಭರವಸೆ ನೀಡಿದರು. 

ಕಾನ್ ಸ್ಟೆಬಲ್  ಗ್ರಾಮಸ್ಥರನ್ನು ನಿಂದಿಸಿರುವ ವಿಡಿಯೊ ವಾ‍ಟ್ಸ್ ಅಪ್ ನಲ್ಲಿ ವೈರಲ್ ಆಗಿದೆ.

Comment here