ಕವನ

ಕುರಿಯ ಹಿಂಡು…

ದೇವರಹಳ್ಳಿ ಧನಂಜಯ


ಕೋಲು ಹಿಡಿದು
ಮುಂದೆ ನಡೆದಿರುವ
ಕುರಿ ಒಡೆಯ

ಸಾಲು ಹಿಡಿದು
ಹಿಂದೆ ನಡೆದಿರುವ
ಕುರಿಯ ಹಿಂಡು

ಕುರಿಯ ಮಂದೆ
ತಲೆ ಕೆಳಗೆ ಎಂದೇ
ಲೋಕದ ನಿಂದೆ

ಬೆಲೆ ಇದೆಯೇ
ಹಿಂದೆ ಮಂದೆ ಇರದ
ಕುರಿಗಾಹಿಗೆ

ಮುಂದೆ ನಡೆವ
ನಾಯಕನಿಗೆ ಬಲ
ಹಿಂದಿನ ಹಿಂಡು.

ನಂಬಿದ ನಡೆ
ದೌರ್ಬಲ್ಯ ಹೇಗಾದೀತು
ಆಡಿಕೊಳ್ಳಲು

ಕುರಿಯ ಬೆಲೆ
ಅರಿಯದ ನಾಯಕ
ಹೇಗೆ ಕಾದಾನು

ಕುರಿಗಾಹಿಯ
ಮುನ್ನಡೆ ಹಿಂಡಿನಿಂದ
ಅರ್ಥಗರ್ಭಿತ

ಕಾಯುವವಗೆ
ಇರಬೇಕು ಸೌಜನ್ಯ
ಕುರಿಯ ಮೇಲೆ

ಬೆನ್ನಿಗೆ ನಿಂತು
ನಡೆವ ಕುರಿ ಹಿಂಡೆ
ನಿಜ ನಾಯಕ

ಇದ ತಿಳಿಯೆ
ನಡಿಗೆ ಪರಿಪೂರ್ಣ
ಕಾಯ್ವ ಕೆಲಸ

ಬೆಲೆ ಇಲ್ಲದ
ದೊಣ್ಣೆ ನಾಯಕ ನಿಂಗೆ
ಬೇಡ ದಿಮಾಕು

Comment here