ಕವನ

ಗುರು

ಬರೇ ಪುಸ್ತಕವನ್ನು
ಮಸ್ತಕಕ್ಕೆ
ತುಂಬುವುದಲ್ಲಾ….

ತನ್ನ ಅನುಭವವೆಂಬ
ಮೂಸೆಯನ್ನು
ಹೊರ ಬಿಡುವವರು…

ವಿಷಯ ಮಾತ್ರವಲ್ಲದೆ
ಜೀವನ ದೃಷ್ಠಿ
ತೋರಿಸುವವರು…

ಮುಂದಿನ ದಾರಿ
ನಿಚ್ಚಳವಾಗಿಸಿ
ಹಚ್ಚಡ ಹೊದಿಸಿದವರು…

ದುರ್ಗಮ ಹಾದಿಯ
ಸುಗಮಗೊಳಿಸಿ
ಹೊಸದಾಗಿಸಿದವರು…

ಅದೇ ವಿಷಯಕ್ಕೆ
ಹೊಸ ಹೊಳಹು
ಕೊಟ್ಟವರು…

ವಿಷಯ
ಹೊಟ್ಟೆಪಾಡಿಗಿಟ್ಟು
ಭವ ಕಳಚಿದವರು…

ಅನಂತ ಏಕಾಂತದಲ್ಲಿ
ನೆನಪಿಗೆ ಬಂದು
ಎದೆ ತುಂಬಿದವರು…

ಶಿಷ್ಯ ಕೋಟಿ
ಹೊಗಳಿದಾಗ
ಕಣ್ಣಲ್ಲಿ ನೀರಿಳಿಸಿದವರು…

ಆ ದೇವನನ್ನೆ
ಮರೆಸಿ
ಗುರು ದೇವರಾದವರು…


ರಜನಿ


ಗುರು ಪೂರ್ಣಿಮೆ ಯಂದು ಅವರವರಿಗೆ ಅವರ
ಗುರು ನೆನಪಿಗೆ ಬಂದು ಎದೆ ತುಂಬಿ ಬರುತ್ತದೆ.
ಗಂಟಲು ಗದ್ಗದವಾಗುತ್ತದೆ. ಗುರು ಸಿಗದವರು ನಿಜವಾಗಲೂ ಅದೃಷ್ಟ ಹೀನರು. ಬರೇ ಹೊಟ್ಟೆ ಪಾಡು
ತೋರಿಸುವರು ಗುರು ಅಲ್ಲಾ. ಬೇರೆ ಆಯಾಮಕ್ಕೆ
ಕರೆದೊಯ್ಯಬೇಕು. ನನ್ನ ಗುರು ಎನ್ನಲು ಹೃದಯ ತಟ್ಟಿರಬೇಕು. ನನ್ನ ಪಟ್ಟ ಶಿಷ್ಯ ಅನ್ನಲು ಪುಣ್ಯ ಮಾಡಿರಬೇಕು.

Comments (1)

  1. The best guru mam you are🌹🙏

Comment here