ತುಮಕೂರು ಲೈವ್

ಡಾ.ಜಿ.ಪರಮೇಶ್ವರ್ ಯುವ ಸೈನ್ಯದಿಂದ‌ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ತುಮಕೂರು: ಅಖಿಲ ಕರ್ನಾಟಕ ರಾಜ್ಯ ಡಾಕ್ಟರ್ ಜಿ , ಪರಮೇಶ್ವರ್ ಯುವ ಸೈನ್ಯ ಮತ್ತು ಪರಿಶಿಷ್ಚ ಪರಿವರ್ತನಾ ವೇದಿಕೆಯ ವತಿಯಿಂದ ಮಹಾರಾಷ್ಟ್ರದ ದಾದರ್ನಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಮನೆಯ ಹೂವಿನ ಕುಂಡ ಹಾಗೂ ಸಿಸಿ ಕ್ಯಾಮೆರಾಗಳ ದ್ವಂಸ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಯನ್ನು ಗಡಿಪಾರು ಮಾಡುವಂತೆ ಜನನ ಜಿಲ್ಲಾಧಿಕಾರಿ ಮುಲಕ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇಂತಹ ವಿದ್ವಂಸಕ ಕೃತ್ಯದಲ್ಲಿ ಭಾಗಿಯಾದವನ ವಿರುದ್ದ ಹರಿಹಾಯ್ದ ಡಾಕ್ಟರ್ ಜಿ. ಪರಮೇಶ್ವರ್ ಯುವ ಸೈನ್ಯ ಯ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಪರೋಕ್ಷವಾಗಿ ಆರೋಪಿಯನ್ನು ಮನುವಾದಿ ವ್ಯವಸ್ಥೆ ರಕ್ಷಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಸಮಾನತೆಯನ್ನು ತಂದು ದೇಶವನ್ನು ಮುನ್ನಡೆಸುತ್ತಿರುವ, ಸಮ ಸಮಾಜದ ಕಲ್ಪನೆಕಂಡ ಸಂವಿಧಾನ ಕರ್ತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ನಿವಾಸಕ್ಕೆ ರಕ್ಷಣೆ ಇಲ್ಲವೆಂದಾದರೇ ಭಾರತದಲ್ಲಿನ ಧ್ವನಿ ಇಲ್ಲದ ಸಮಾಜದ ವ್ಯವಸ್ಥೆ ಏನಿರಬಹುದು ಎಂದು ಪ್ರಶ್ನಿಸಿದರು..?

ನಂತರ ಮಾತನಾಡಿದ ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಈ ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥನಂತೆ, ಇಂತಹ ಕಥೆಗಳನ್ನು ಸೃಷ್ಟಿಸಿ, ದೇಶ ಮತ್ತು ಸಂವಿಧಾನ ಶಿಲ್ಪಿಯ ಮನೆಗೆ ಅಗೌರವ ತೋರಿರುವುದು ಜಾತ್ಯಾತೀತ ರಾಷ್ಟ್ರದಲ್ಲಿನ ಜಾತಿಯತೆಯ ಹೀನಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಲಜ್ಜೆಗೆಟ್ಟ ಸರ್ಕಾರಗಳಿಗೆ ಕಿಂಚಿತ್ತಾದರೂ ಸಂಸ್ಕಾರ ವಿದ್ದರೇ ಈ ಪ್ರಕರಣದ ಆರೋಪಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಮಂಪರು ಪರೀಕ್ಷೆ ಮಾಡಿಸಿ, ಇದರ ಹಿಂದಿರುವ ಕಾಣದ ಕೈಗಳನ್ನು ಕಂಡು ಹಿಡಿದು ಆರೋಪಿಯನ್ನು ಸೇರಿದಂತೆ ಕೃತ್ಯಕ್ಕೆ ಸಹಕಾರ & ಬೆಂಬಲ ನೀಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ವಿಚಾರಣೆಯ ದಿಕ್ಕನ್ನು ತಪ್ಪಿಸಿದರೇ ದೇಶದಲ್ಲಿ ಮನುವಾದಿ ವ್ಯವಸ್ಥೆ ವಿರುದ್ಧ ಬಂಡೆದ್ದು ಮತ್ತೊಂದು ಕೊರೆಂಗಾವ್ ಯುದ್ಧ ನಡೆಸಬೇಕಾದೀತು ಎಂದು ಎಚ್ಚರಿಸಿದರು..

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ರಜನಿ ಕಾಂತ, ಕೃಷ್ಣಪ್ಪ ಹೆಗ್ಗೆರೆ, ತುಮಕೂರು ಗ್ರಾಮಾಂತರ ಅಧ್ಯಕ್ಷರಾದ ಗಿರಿಸ್ವಾಮಿ, ಮಧುಗಿರಿ ಅಧ್ಯಕ್ಷರಾದ ವಿಜಯ್, ಟೈಗರ್ ಮಹೇಶ್, ರವರು ಹಾಗೂ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comment here