ಕವನ

ಡಾ. ರಜನಿ ಕವಿತೆ: ಮಳೆ

ಒಂದೊಂದೇ
ಹನಿ ಟಪ್ ಟಪ್…
ಮನೆಯ ಮಾಡು
ತಗಡಿನ ಶೀಟು …..

ಟಿಪ್ ಟಿಪ್
ಮನೆಯೊಳಗಣ
ಈಜುಕೊಳ …..

ಟಪ್ ಟಪ್
ಕೆಲಸಕ್ಕೆ ಹೊರಟ ಕಾರ್ಮಿಕ
ಹಿಡಿದ ಛತ್ರಿ ಮೇಲೆ
ಟಿಫಿನ್ ಬಾಕ್ಸ್ ಮೇಲೆ ….

ಟಪ್ ಟಪ್
ರೈನ್ ಕೋಟ್
ಹಾಕಿದ ಶಾಲೆಗೆ ಹೊರಟ
ಮಗುವಿನ ತಲೆ ಮೇಲೆ….

ಟಪ್ ಟಪ್
ಜುರ್ರೆಂದು ಓಡುತ್ತಿರುವ
ಕಾರಿನ ಮೇಲೆ…

ಟಪ್ ಟಪ್
ತೊಳೆಯಲು ಅಂಗಳದಲ್ಲಿ
ಇಟ್ಟ ಪಾತ್ರೆ ಮೇಲೆ…

ಟಪ್ ಟಪ್
ಮರದ ಎಲೆ ಮೇಲೆ

ಟಪ್ ಟಪ್
ಮೇಲಕ್ಕೆ ಎತ್ತಿದ
ಮೊಗದ ಮೇಲೆ…
ತುಟಿ ಮೇಲೆ…


ರಜನಿ

Comment here