ಜಸ್ಟ್ ನ್ಯೂಸ್

ತಿಪಟೂರು ಕೊರೊನಾ ಶಂಕೆ: ಚಾಲಕ ಆಸ್ಪತ್ರೆಗೆ ಸ್ಥಳಾಂತರ

ತಿಪಟೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ತಿಪಟೂರಿನ ಗಾಂಧಿನಗರದಲ್ಲಿರುವ ಚಾಮುಂಡೇಶ್ವರಿ ಬಡಾವಣೆಯಲ್ಲಿನ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈತ ಕೊಬ್ಬರಿ ವರ್ತಕರೊಬ್ಬರ ಬಳಿ ಲಾರಿ ಚಾಲಕರಾಗಿದ್ದು, ಕೊಬ್ಬರಿ ತೆಗೆದುಕೊಂಡು ಮುಂಬೈಗೆ ಹೋಗಿ ಬಂದ ಹಿನ್ನೆಲೆ ಇದೆ.

ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಏನನ್ನು ಇಲ್ಲಿಯವರೆಗೂ ಹೇಳಿಲ್ಲ.

Comment here