ತುಮಕೂರು ಲೈವ್

ತುಮಕೂರು ಪಾಲಿಕೆ ಕಾರ್ಮಿಕರಿಗೆ ರೈನ್ ಕೋಟ್ ಬೇಡವೇ?

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ಆರೋಗ್ಯ ನಿರೀಕ್ಷಕರಿಗೆ ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಒಂದು ಮಳೆಗಾಲ ರಕ್ಷಣೆ ಕವಚ ಅಂದರೆ ರೈನ್ ಕೋಟು ಮತ್ತು ಇನ್ನಿತರ ಸಲಕರಣೆಗಳನ್ನು ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಪಾಷಾ ಒತ್ತಾಯಿಸಿದ್ದಾರೆ.

ಪೌರ ಕಾರ್ಮಿಕರಿಗೆ ಒಂದು ವಾಹನವನ್ನು ಸಹ ನೀಡಬೇಕು. ಮಳೆಗಾಲದಲ್ಲಿ ಪ್ರತಿ ಬೀದಿಯಲ್ಲೂ ಮತ್ತು ಮುಖ್ಯರಸ್ತೆಗಳಲ್ಲಿ ಸಹ ಇವರೇ ಜಾಸ್ತಿ ಕೆಲಸ ನಿರ್ವಹಿಸುತ್ತಿರುವ ಕಾರಣ ಇವರಿಗೆ ಒಂದು ವಾಹನವನ್ನು ಸಹ ಒದಗಿಸಿಕೊಡಬೇಕು. ಕೆಲವು ಅಧಿಕಾರಿಗಳಿಗೆ ಮನೆಗೆ ಹೋಗಿ ಬರಲು ಕಾರನ್ನು ನೀಡುತ್ತಿದ್ದೀರಾ ಇವರಿಂದ ಏನೂ ಪ್ರಯೋಜನ ಇಲ್ಲ ಎಂದಿದ್ದಾರೆ.

ಮಳೆಗಾಲ ಮುಗಿಯುವ ತನಕ ಆರೋಗ್ಯ ನಿರೀಕ್ಷಕರಿಗೆ ಮತ್ತು ಮಳೆಗಾಲದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ವರ್ಗಗಳಿಗೆ ವಾಹನಗಳನ್ನು ಒದಗಿಸಿಕೊಡಬೇಕು ಮತ್ತು ರಕ್ಷಣಾ ಕವಚಗಳನ್ನು ಇವರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

Comment here