ಜಸ್ಟ್ ನ್ಯೂಸ್

ದುಬಾರಿ ದರ ವಸೂಲಿಗಿಳಿದ ಸಕಾ೯ರ: ಸಿಪಿಐ(ಎಂ) ಖಂಡನೆ

Bengaluru: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸಕಾ೯ರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾಮಿ೯ಕರಿಂದಲೆ ಪ್ರಯಾಣ ದರ ಪಡೆಯುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

40 ದಿನಗಳಿಗೂ ಹೆಚ್ಚು ಲಾಕ್ಡೌನ್ ನಿಂದಾಗಿ ಕೆಲಸ ಆದಾಯ ವಿಲ್ಲದೆ ಹಸಿವಿನಿಂದ ಬಳಲಿದ್ದ ಅಸಂಘಟಿತ ಕಾಮಿ೯ಕರಿಗೆ ದೂರದ ತಮ್ಮ ಊರುಗಳಿಗೆ ಹೋಗಲು ಕೊನೆಗೆ ರೈಲುಗಳನ್ನು ಪುನರಾರಂಭ ಮಾಡಿದ ರಾಜ್ಯ ಸಕಾ೯ರವು ತಲಾ 970 ರೂಗಳನ್ನು ಲಖನೌಗೆ ಹೋಗುವ ಕಾಮಿ೯ಕರಿಂದ ರಾಜ್ಯ ಸಕಾ೯ರ ಒದಗಿಸುವ ಬಿಎಂಟಿಸಿ ಬಸ್ ಸೇವೆ ವೆಚ್ಚವನ್ನು ಸೇರಿಸಿ ಪಡೆಯುತ್ತಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

4 ಜನರ ಕುಟುಂಬಕ್ಕೆ 4 ಸಾವಿರ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲಿಗೆ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ಮುನ್ನ ಬಿಎಂಟಿಸಿ ಬಸ್ ಏರುವ ಮೊದಲು 970 ರೂಗಳ ಬಿಎಂಟಿಸಿ ಟಿಕೆಟ್ ಖರೀದಿ ಮಾಡಬೇಕು, ಹೋಗುವ ದಾವಂತದಲ್ಲಿ ಕೆಲವೊಮ್ಮೆ ಚಿಲ್ಲರೆ ಕೇಳಿದರೆ ಎಲ್ಲಿ ಹೋಗಲು ಬಿಡುವುದಿಲ್ಲವೊ ಎಂಬ ಆತಂಕದಲ್ಲಿ 30ರೂಗಳನ್ನು ಕೇಳಲಿಲ್ಲ ಎಂಬ ಅಳಕನ್ನು ಕೆಲವರು ತೊಡಿಕೊಂಡಿದ್ದಾರೆ.
ಆನಂತರ ರೈಲು ಏರಿದ ಮೇಲೆ ಬಿಎಂಟಿಸಿ ಟಿಕೆಟ್ ಪಡೆದು ರೈಲ್ವೆಯ 830 ರೂಗಳ ಟಿಕೆಟ್ಗಳನ್ನು ಪ್ರತಿ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಬಿಎಂಟಿಸಿ ಪ್ರತಿ ಕಾಮಿ೯ಕರಿಂದ 140 ರೂಗಳನ್ನು ಬಹುತೇಕ ವಾಯು ಸಾರಿಗೆ ಧರದಲ್ಲಿ ಸಾಮಾನ್ಯ ಬಸ್ಗಳಲ್ಲಿ ವಲಸೆ ಕಾಮಿ೯ಕರಿಂದ ಪಡೆಯುತ್ತಿರುವುದು ರಾಜ್ಯ ಸಕಾ೯ರದ ಲೂಟಿ ಕೋರತನವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೇಂದ್ರ ಸಕಾ೯ರವು ಉಚಿತ ರೈಲು ನೀಡುವ ಬದಲು, ಸೂಪರ್‌‌‌ ಫಾಸ್ಟ್ ರೈಲಿನ ದರವನ್ನು ವಸೂಲಿ ಮಾಡುತ್ತಿದೆ. ಶ್ರೀಮಂತರಿಗೆ, ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಗಳ ಅನುದಾನವನ್ನು ನೀಡುವ, ಸಾಲಮನ್ನ ಮಾಡುವ ಕೇಂದ್ರ ಬಿಜೆಪಿ ಸರಕಾರ ಬಡ ಕಾಮಿ೯ಕರಿಗೆ ಉಚಿತ ರೈಲಿನ ವ್ಯವಸ್ಥೆ ಮಾಡದೆ ತನ್ನ ಕಾಮಿ೯ಕ ವಿರೋಧಿ ನೀತಿಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.

ಅಂತರ ರಾಜ್ಯ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಕಳುಹಿಸದಿರಲು ಶತ ಪ್ರಯತ್ನ ಮಾಡಿ ವಿಫಲವಾದ ರಾಜ್ಯ ಸಕಾ೯ರವು ಬಿಎಂಟಿಸಿ ಸೇವೆಗೆ ದುಬಾರಿ ದರ ಪಡೆದು ವಲಸೆ ಕಾಮಿ೯ಕರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಸೆ ಕಾಮಿ೯ಕರ ನೆರವಿಗೆ ಧಾವಿಸದೆ ಪ್ರತಿ ಹಂತದಲ್ಲೂ ಅವರನ್ನು ದೋಚುತ್ತಿರುವ ಕ್ರಮವು ಸಕಾ೯ರಗಳು ನಿವ೯ಹಿಸ ಬೇಕಾದ ಸಂವಿಧಾನಿಕ ಕತ೯ವ್ಯವನ್ನೂ ಬಿಜೆಪಿ ಮರೆತಿರುವುದರ ಪ್ರತೀಕ ಎಂದು ಸಿಪಿಐ(ಎಂ) ಖಂಡಿಸಿದೆ. ಕೂಡಲೇ ಉಚಿತ ರೈಲಿನ ವ್ಯವಸ್ಥೆಯನ್ನು ಪಿಎಂ ಕೇರ್ ನಿಧಿಯಿಂದ ಮಾಡಬೇಕು, ರಾಜ್ಯ ಸಕಾ೯ರವು ಉಚಿತ ಬಿಎಂಟಿಸಿ ಸೇವೆ ಒದಗಿಸ ಬೇಕೆಂದು ಸಿಪಿಐ (ಎಂ) ಒತ್ತಾಯಿಸಿದೆ.

Comment here