ಜಸ್ಟ್ ನ್ಯೂಸ್

ಪಾವಗಡ ಜೆಡಿಎಸ್ ವತಿಯಿಂದ ಆಹಾರ ವಿತರಣೆ

ಪಾವಗಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ಆಹಾರ ವಿತರಣೆಗೆ ಚಾಲನೆ ನೀಡಲಾಯಿತು.

ಕೊರೊನಾ ಲಾಕ್ ಡೌನ್ ನಿಂದಾಗಿ ಹೋಟೆಲ್ ಗಳು ಕಾರ್ಯ ನಿರ್ವಹಿಸದ ಕಾರಣ ಗ್ರಾಮೀಣ ಭಾಗದಿಂದ ಆಸ್ಪತ್ರೆ, ಬ್ಯಾಂಕ್, ಇತ್ಯಾದಿ ಕೆಲಸಗಳಿಗಾಗಿ ಬಂದ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಜೊತೆಗೆ ಪಟ್ಟಣದ ಬಡಾವಣೆಗಳಲ್ಲಿನ ಕೆಲ ಬಡ ಕುಟುಂಬಗಳಿಗೆ ಆಹಾರದ ಅಗತ್ಯವಿದೆ ಹೀಗಾಗಿ ಮೇ-3 ರವರೆಗೆ ನಿತ್ಯ ಮಧ್ಯಾಹ್ನ ಆಹಾರ ವಿತರಿಸಲಾಗುವುದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಜಿಲ್ಲೆಯಾದ್ಯಂತ  ಮಾಸ್ಕ್, ಆಹಾರ, ಬಟ್ಟೆ, ಪಡಿತರ ಇತ್ಯಾದಿ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ. ತಾಲ್ಲೂಕಿನಲ್ಲಿಯೂ ಮೇ-3  ಕುಟುಂಬಗಳಿಗೆ ಆಹಾರ ವಿತರಿಸಿಸಲು ನಿರ್ಧರಿಸಲಾಗಿದೆ. ಮೇ-3 ರ ನಂತರ ಲಾಕ್ ಡೌನ್ ಮುಂದುವರೆದಲ್ಲಿ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಯೋಜನೆ ಮುಂದುವರೆಸಲಾಗುವುದು ಎಂದರು.

ಜನತೆ ಸರ್ಕರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು. ಮನೆಯಿಂದ ಹೊರಬರದೆ ಕೊರೊನಾ ಹರಡುವುದನ್ನು ತಡೆಗಟ್ಟಬೇಕು ಎಂದು ಕರೆ ನೀಡಿದರು.

ಬೊಮ್ಮತನಹಳ್ಳಿ ಮಾರ್ಗದ ಆಶ್ರಮದ ಬಳಿ ಆಹಾರ ಸಿದ್ದಪಡಿಸಲಾಯಿತು. ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಅಡುಗೆ ತಯಾರಿ ಹಾಗೂ ವಿತರಣಾ ಕಾರ್ಯದಲ್ಲಿ ಭಾಗವಹಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ  ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ  ಈರಣ್ಣ, ಕಾರ್ಯದರ್ಶಿ ಸಾರವಾಟಪುರ ಬಾಬು, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌಧರಿ, ನಗರ ಘಟಕದ ಅಧ್ಯಕ್ಷ ಶಾಂತಕುಮಾರ್, ಪುರಸಭೆ ಸದಸ್ಯ ಗೊರ್ತಿ ನಾಗರಾಜು,  ಮುಖಂಡ ತಿಮ್ಮಾರೆಡ್ಡಿ, ಮನು, ಗೋಪಾಲ್, ವಸಂತ್, ವೆಂಕಟೇಶ್, ನಾಗೇಂದ್ರ, ಮಣಿ, ಕುಮಾರ್, ನಲ್ಲಪ್ಪ, ಯೂನಸ್, ಮತಿನ್, ಈರಣ್ಣ ಇತರರು ಇದ್ದರು.

Comment here