ಜಸ್ಟ್ ನ್ಯೂಸ್

ಪಿಎಸೈ ಮರುಪರೀಕ್ಷೆ : ಎಚ್.ಡಿ.ಕೆ.‌ ವಿರೋಧ, ರೂಪಾ ಪರ

Publicstory


ವ್ಯಾಪಕ ಅಕ್ರಮದ ಹಿನ್ನೆಲೆಯಲ್ಲಿ ಪಿಎಸ್ ಐ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮರುಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಡಿ ರೂಪಾ ಅವರ ಟ್ವೀಟ್ ಅನ್ನು ಬೆಂಬಲಿಸಿ ಮಾಜಿ ಪೊಲೀಸ್ ಅಧಿಕಾರಿ ರಾಜಕಾರಣಿ ಕಿರಣ್ ಬೇಡಿಯವರು ಇಂಥವರೇ ಇರಬೇಕು ಎಂದು ಹೇಳಿದ್ದಾರೆ.

ಮರುಪರೀಕ್ಷೆಯಿಂದ ಕಡುಬಡವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಮರು ಪರೀಕ್ಷೆ ಆಡದಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.

ಅಭ್ಯರ್ಥಿಗಳ ನೋವನ್ನು ಆಲಿಸಿದ ಕುಮಾರಸ್ವಾಮಿ ಮರುಪರೀಕ್ಷೆ ನಡೆಸದಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.

ಮರು ಪರೀಕ್ಷೆ ಮಾಡಿದರೆ ಮಾತ್ರ ಅನ್ಯಾಯ ಸರಿಪಡಿಸಿದಂತಾಗುವುದಿಲ್ಲ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ವರ್ಗಾವಣೆ ಮಾತ್ರವೇ ಸಾಲದು ಎಂಬ ಡಿ. ರೂಪಾ ಹೇಳಿಕೆ ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ, ಮರು ಪರೀಕ್ಷೆಯಲ್ಲೂ ಅಕ್ರಮ ಆಗದು ಎಂಬ ಭರವಸೆ ಏನಿದೆ ಎಂದು ಎಚ್ಡಿಕೆ ಕೇಳಿದ್ದಾರೆ.

Comment here