ಜಸ್ಟ್ ನ್ಯೂಸ್

ಬಸ್, ರೈಲು ಇಲ್ಲ; ವಿ.ವಿ.ಗಳಿಗೆ ರಜೆ ಸಾರಿದ UGC, 9 ಜಿಲ್ಲೆಗಳಲ್ಲಿ ಎಲ್ಲವೂ ಕಡಿತ

Publicstory.in


Tumkuru; ದೇಶದಲ್ಲಿ ಕರೊನಾ ಸಾವು ಹೆಚ್ಚುತ್ತಿದ್ದಂತೆ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ನಾಳೆ ಮಾರ್ಚ್ 31 ಎಲ್ಲ ಪ್ಯಾಸೆಂಜರ್ ರೈಲು ಸೇವೆಗಳನ್ನು ಬಂದ್ ಮಾಡಿದೆ.

ಇನ್ನೂ, ರಾಜ್ಯ ಸರ್ಕಾರ ನಾಳೆ ಮಾ.23ರಂದು ಸಹ ರಾಜ್ಯದಲ್ಲಿ ಸಾರಿಗೆ ಬಸ್ ಗಳನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ. ಹೀಗಾಗಿ ನಾಳೆಯೂ ಹೆಚ್ಚು ಕಡಿಮೆ ಜನತಾ ಕರ್ಪ್ಯೂ ವಾತಾವರಣವೇ ಮುಂದುವರೆಯಲಿದೆ.

ಈಗಾಗಲೇ ರಾಜ್ಯದ 9 ಜಿಲ್ಲೆಗಳಲ್ಲಿ ಕರೊನಾ ಪೀಡಿತರು ಕಂಡು ಬಂದಿದ್ದು, ಈ ಎಲ್ಲ ಜಿಲ್ಲೆಗಳಲ್ಲೂ ಎಲ್ಲ ವಹಿವಾಟು ಬಂದ್ ಮಾಡಲಾಗುವುದು ಎಂದು ತಿಳಿಸಿದೆ. ಈ ಜಿಲ್ಲೆಗಳಿಗೆ ಬಸ್ ಸಂಚಾರ ಬಂದ್ ಮಾಡಿದೆ.

ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ದಿನ ಬಿಟ್ಟು ದಿನ ಕೆಲಸಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿದೆ. ಹೀಗಾಗಿ ರಾಜ್ಯದ ಎಲ್ಲ‌ ವಿ.ವಿ.ಗಳು ನಾಳೆಯಿಂದ ಬಂದ್‌ ಆಗಲಿವೆ.

Comments (1)

  1. ನಿಮ್ಮ ಡಿಜಿಟಲ್ ಪತ್ರಿಕೆ ಯಾವುದೇ ಪತ್ರಿಕೆ ಗೆ ಕಮ್ಮಿ ಇಲ್ಲದಂತೆ ಉತ್ತಮ ಮಾಹಿತಿ ಗಳನ್ನು ನೀಡುತ್ತಿದ್ದೀರಿ ನಿಮಗೆ ಅಭಿನಂದನೆಗಳು.

Comment here