ಜಸ್ಟ್ ನ್ಯೂಸ್

ಮಣ್ಣಕುಪ್ಪೆಯಲ್ಲಿ‌ ನಾರಸಿಂಹಸ್ವಾಮಿ ಬ್ರಹ್ಮರಥೋತ್ಸವ: ವಿಶೇಷ ಏನೇನು?

mannakuppe

Publicstory


ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆ ಗ್ರಾಮದ ಆರಾಧ್ಯ ದೈವ ಶ್ರೀ ನಾರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಕಳೆದ ಮೂರು ದಿನಗಳಿಂದ ಅಂಕುರಾರ್ಪಣೆ, ಕಲಾಶರೋಹಣ, ಚಂದ್ರಮಂಡಲೋತ್ಸವ ಕಾರ್ಯಕ್ರಮ ನಡೆದಿತ್ತು. ಒಟ್ಟು ೬ ದಿನಗಳ ಜಾತ್ರೆಯಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದು ಶನಿವಾರ ಚಿತ್ತಾ ನಕ್ಷತ್ರದಲ್ಲಿ ಮದ್ಯಾಹ್ನ ೩ ಕ್ಕೆ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ನಾನಾ ಭಾಗದಿಂದ ಆಗಮಿಸಿದ ಸಾವಿರಾರು ಭಕ್ತರು ತಮ್ಮ ಹರಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಪಾನಕ ಫಲಹಾರ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಇಡೀ ಜಾತ್ರಾ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಾಕ್ಷಿಯಾದರು.

ಏ.೧೭ ರಂದು ಬೆಲ್ಲದೋತ್ಸವ, ಪಲ್ಲಕ್ಕಿ ಉತ್ಸವ ನಡೆಸಿ, ಏ. ೧೮ ರಂದು ವಸಂತೋತ್ಸವ, ಇಂದ್ರಜೀತೋತ್ಸವ ನಡೆಸಿ ಏ.೧೯ ರ ರಾತ್ರಿ ಕಂಚಿನ ಕುದುರೆ ಉತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

Comment here