ಜಸ್ಟ್ ನ್ಯೂಸ್

ಮುಂದಿನ ವಾರದಿಂದ ತುಮಕೂರು ಕೆರೆಗಳಿಗೆ ಹೇಮಾವತಿ ನೀರು‌

ತುಮಕೂರು: ಹೇಮಾವತಿ ಎಡದಂಡ ನಾಲೆ ಮೂಲಕ ತುಮಕೂರು‌‌ ಜಿಲ್ಲೆಯ ಗುಬ್ಬಿ, ತಿಪಟೂರು, ತುರುವೇಕೆರೆ, ತುಮಕೂರು ತಾಲ್ಲೂಕುಗಳ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ಕೊನೆಗೂ ಒಪ್ಪಿಗೆ ಸಿಕ್ಕಿದೆ.

ತುಮಕೂರಿಗೆ ಈಚೆಗೆ ನೀರು ಬಿಟ್ಟ ಒಂದೇ ವಾರದಲ್ಲಿ ನಿಲ್ಲಿಸಲಾಗಿತ್ತು. ಈಗ ಮುಖ್ಯಮಂತ್ರಿ‌ ಸೂಚನೆ ಮೇರೆಗೆ ಸಭೆ ನಡೆಸಿರುವ ಸಲಹಾ ಸಮಿತಿಯು‌ ತುಮಕೂರು ಜಿಲ್ಲೆಯ ಜತೆಗೆ ಹಾಸನ, ಮಂಡ್ಯ ಜಿಲ್ಲೆಗೂ ನೀರು ಹರಿಸಲು ಒಪ್ಪಿಗೆ ಸೂಚಿಸಿದೆ.

ಹಾಸನ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ‌ಸಭೆ ನಡೆಯಿತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕರಾದ ಎಂ.ಎ. ಗೋಪಾಲಸ್ವಾಮಿ, ಪ್ರೀತಂ ಜೆ. ಗೌಡ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

ಮಳೆಗಾಲಕ್ಕು ಮುನ್ನವೇ ಕಾಲುವೆಯಲ್ಲಿ ನೀರು ಹರಿಯುವುದನ್ನು ನೋಡಲು ರೈತರು ತುದಿಗಾಲ ಮೇಲೆ ನಿಂತಿದ್ದಾರೆ.

Comment here