ಜಸ್ಟ್ ನ್ಯೂಸ್

ಮುತ್ತಪ್ಪ‌ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: 6 ಮಂದಿ ಬಂಧನ

ರಾಮನಗರ: ಮಾಜಿ‌ ಭೂಗತ ದೊರೆ, ಸಮಾಜ ಸೇವಜ ಮುತ್ತಪ್ಪ‌ ರೈ ಅವರ ಅಂತ್ಯಕ್ರಿಯೆ ವೇಳೆ ಆರು ಮಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮುತ್ತಪ್ಪ ರೈ ಅವರ ಎರಡನೇ ಪುತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವಾಗ ಗಾಳಿಯಲ್ಲಿ ಗುಂಡು ಹಾರಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಮುತ್ತಪ್ಪ ರೈ ಅವರ ಆರು ಜನ ಗನ್‌ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ ಬಿಡದಿಯಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಆರೋಪಿಗಳು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಮೋನಪ್ಪ, ಚಾತರ್ ಸಿಂಗ್,ಗಿರೀಶ್, ಲಕ್ವಿರ್ ಸಿಂಗ್, ರಂಜಿತ್ ರೈ‌ ಹಾಗೂ ಸುನಿಲ್ ಎನ್ನಲಾಗಿದೆ.

Comment here