ಜಸ್ಟ್ ನ್ಯೂಸ್

ಮೃತ ಪತ್ರಿಕಾ ವಿತರಕ ಹರೀಶ್ ಕುಟುಂಬಕ್ಕೆ ಜಿಲ್ಲಾ ವಿತರಕರ ಸಂಘದಿಂದ ಆರ್ಥಿಕ ನೆರವು

Publicstory


ಗುಬ್ಬಿ: ಮನೆ ಬಾಗಿಲಿಗೆ ಪತ್ರಿಕೆ ಹಂಚುವ ವಿತರಕರ ನೋವು ನಲಿವಿಗೆ ಸ್ಪಂದಿಸುವ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಈಚೆಗೆ ಮೃತ ಪಟ್ಟ ಗುಬ್ಬಿಯ ಹರೀಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.

ಅನಾರೋಗ್ಯದಿಂದ ಮೃತ ಪಟ್ಟ ಹರೀಶ್ ಕಳೆದ ಆರು ವರ್ಷದಿಂದ ಪತ್ರಿಕೆ ಹಂಚಿಕೊಂಡು ತನ್ನ ವಿಧ್ಯಾಭ್ಯಾಸ ನಡೆಸಿ ಉದ್ಯೋಗವನ್ನು ಮಾಡಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಇಂತಹ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆ ಆರ್ಥಿಕ ನೆರವು ಮಾಡುವ ಕಾಯಕ ಸಂಘ ಮಾಡುತ್ತಿದೆ ಎಂದು ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ಚಲುವರಾಜು ತಿಳಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್ ಮಾತನಾಡಿ ವಿತರಕರ ಸಂಘ ಮೊದಲು ಜಿಲ್ಲಾ ಮಟ್ಟದಲ್ಲಿ ಕೆಲಸ ಆರಂಭಿಸಿ ನಂತರ ರಾಜ್ಯ ವ್ಯಾಪಿ ಬೆಳೆಸಲು 22 ಜಿಲ್ಲೆಯಲ್ಲಿ ಸಂಚಾರ ಮಾಡಿದ್ದೇವೆ. ಒಳ್ಳೆಯ ಸ್ಪಂದನೆ ಬಂದ ಕಾರಣ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗಯ್ಯ ಮಾರ್ಗದರ್ಶನದಲ್ಲಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಂಡಿಸುತ್ತೇವೆ. ಪತ್ರಿಕಾ ವಿತರಕರ ಸಂಕಷ್ಟ ಆಲಿಸುವವರಿಲ್ಲದೆ ಅಸಂಘಟಿತರು ಎನ್ನುವ ಬಗ್ಗೆ ಅರಿತು ಈ ಸಂಘ ಚುರುಕಿನ ಕೆಲಸ ನಡೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ರಂಗಮುದ್ದಯ್ಯ, ನಿರ್ದೇಶಕ ಭೂತೇಶ್, ಖಜಾಂಚಿ ಆನಂದ್ ಇತರರು ಇದ್ದರು.

Comment here