ಜಸ್ಟ್ ನ್ಯೂಸ್

ಲೋಕಕಲ್ಯಾಣಕ್ಕಾಗಿ ಚಂಡಿ ಹೋಮ

ಪಾವಗಡ: ತಾಲ್ಲೂಕಿನ ತಿರುಮಣಿ ಬಳಿಯ ರಾಯಚೆರ್ಲು – ಅಚ್ಚಮ್ಮನಹಳ್ಳಿ ಮಧ್ಯದ ಪೋಲೇರಮ್ಮ ದೇಗುಲದಲ್ಲಿ ಉತ್ತಮ ಮಳೆ ಬೆಳೆ, ಲೋಕಕಲ್ಯಾಣಕ್ಕಾಗಿ ವಿಶೇಷ ಹೋಮ ಹವನ ಪೂಜೆ ನಡೆಸಲಾಯಿತು.

ಸತತ 5 ದಿನಗಳ ಕಾಲ  ನಡೆದ ವಿಶೇಷ ಪೂಜೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

ಮಂಗಳವಾರ  ಗಣಪತಿ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ ನಡೆಸಲಾಯಿತು. ರುದ್ರ ಹೋಮ, ಶತ ಚಂಡಿ ಪಾರಾಯಣ, ಶ್ರೀ ಚಕ್ರ ನವಾವರಣ ಪೂಜೆ ನಡೆಯಿತು.

ಶನಿವಾರ ಚಂಡಿ ಹೋಮದಲ್ಲಿ ಭಾಗವಹಿಸಲು ನಾಗಲ ಮಡಿಕೆ ಹೋಬಳಿಯೆ ವಿವಿಧ ಗ್ರಾಮಗಳ ಜನತೆ ಆಗಮಿಸಿದ್ದರು. ಚಂಡಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.

ಪ್ರಧಾನ ಅರ್ಚಕ ವೇಣುಗೋಪಾಲಸ್ವಾಮಿ, ಪಾಂಡುರಂಗನಾಥಶರ್ಮ ಪೂಜೆಯ ನೇತೃತ್ವ ವಹಿಸಿದ್ದರು.

ಸತತ 5 ದಿನಗಳ ಕಾಲ ಹೋಮ ಹವನಾದಿಗಳನ್ನು ನಡೆಸಲಾಯಿತು. ಈ ಪ್ರದೇಶದಲ್ಲಿ ಉತ್ತಮ ಮಳೆ, ಬೆಳೆಯಾಗುವಂತೆ ಚಂಡಿ ಹೋಮ, ರುದ್ರ ಹೋಮ ನಡೆಸಲಾಗಿದೆ ಎಂದು ಪಾಂಡುರಂಗನಾಥಶರ್ಮ ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

Comments (1)

  1. ತುಂಬಾ ಒಳ್ಳೆಯ ಪೂಜೆ

Comment here