ಜಸ್ಟ್ ನ್ಯೂಸ್

ವಲಸೆ ಕಾಮಿ೯ಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ

ತುಮಕೂರು: ವಲಸೆ ಕಾಮಿ೯ಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸಕಾ೯ರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಉಚಿತ ಸಾರಿಗೆ ವ್ಯವಸ್ಥೆ ಮಾಡಲು ಒತ್ತಾಯಿಸಿವೆ.

ಸಾರಿಗೆ ಸಂಸ್ಥೆಗಳಿಗೆ ಸಕಾ೯ರ ವಲಸೆ ಕಾಮಿ೯ಕರ ಪ್ರಯಾಣ ವೆಚ್ಚ ಭರಿಸಬೇಕು, ಹೆದ್ದಾರಿ ಟೋಲ್ ವಿನಾಯಿತಿ ನೀಡಲು ಕೇಂದ್ರ ಸಕಾ೯ರವನ್ನು ಒತ್ತಾಯಿಸ ಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ದುಬಾರಿ ದರ ನಿಗದಿ ಮಾಡಿ ರಾಜ್ಯ ಸಕಾ೯ರವು ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾಮಿ೯ಕರನ್ನು ದೋಚುತ್ತಿದೆ. ಮೇ ದಿನದಂದು ಕಾಮಿ೯ಕರಿಗೆ ಶುಭಾಶಯ ಕೋರಿ ಅದೇ ದಿನ ಅವರನ್ನು ವಂಚಿಸಿದೆ.

ಕಾಮಿ೯ಕರು ದುಬಾರಿ ದರ ನೀಡಲಾರದೆ ಇರುವಲ್ಲೆ ಉಳಿದು ಬದುಕುಳಿಯಲು ತಮ್ಮಪ್ರಾಣವನ್ನು ಪಣಕ್ಕಿಟ್ಟು ಬಿಲ್ಡರಗಳ ಚಾಕರಿಗೆ ಸಿಗುವಂತಾಗಲಿ ಎಂಬುದು ಸಕಾ೯ರದ ದುರುದ್ದೇಶವಾಗಿದೆ.

ಬಿಲ್ಡರಗಳ ಲಾಭಿಗೆ ಮಣಿದು ಲಾಕ್ಡೌನ್ ಕಾಲಾವಧಿಯಲ್ಲಿ ಮೊದಲಿಗೆ ಕಟ್ಟಡ ನಿರ್ಮಾಣ ಕಾಯ೯ಕ್ಕೆ ಅನುಮತಿಸಿದ್ದ ರಾಜ್ಯ ಸಕಾ೯ರವು ಇದೀಗ ವಲಸೆ ಕಾಮಿ೯ಕರು ಅವರ ಊರುಗಳಿಗೆ ಹೋಗಲು ಒಲ್ಲದ ಮನಸ್ಸಿನಿಂದ ಅನುಮತಿಸಿದ್ದು ಹೋಗದಂತೆ ಮಾಡಲು ಹೂಡಿರುವ ಕುತಂತ್ರವೇ ದುಬಾರಿ ದರ ನಿಗದಿ ಹಿಂದಿರುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಅಂತರ ರಾಜ್ಯ ವಲಸೆ ಕಾಮಿ೯ಕರು ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗಲು ನೆರೆಯ ಕೇರಳ ಹಾಗು ತೆಲಂಗಾಣ ರಾಜ್ಯ ಸಕಾ೯ರಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ಈಗಾಗಲೆ ಸಾವಿರಾರು ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿವೆ.

ಅದರೆ ಕನಾ೯ಟಕದ ಬಿಜೆಪಿ ಸಕಾ೯ರವು ಅಂತಹ ಯಾವುದೆ ಕ್ರಮವಹಿಸದೆ ರಾಜ್ಯದ ಬಿಲ್ಡರಗಳ ಹಿತಾಸಕ್ತಿಗಾಗಿ ಶ್ರಮಿಸುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೂಡಲೇ ಅಂತರ ರಾಜ್ಯ ವಲಸಿಗರಿಗೆ ತಮ್ಮ ಊರುಗಳಿಗೆ ಹೋಗಲು ಉಚಿತ ರೈಲಿನ ವ್ಯವಸ್ಥೆ ಮಾಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ ಕೆ. ಎನ್. ಉಮೇಶ್ ಹಾಗೂ ಬೆಂಗಳೂರು ಉತ್ತರ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ‌ ಒತ್ತಾಯಿಸಿದ್ದಾರೆ.

Comment here