ಜಸ್ಟ್ ನ್ಯೂಸ್

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಡಾ.ಕೆ.ರಾಕೇಶ್ ಕುಮಾರ್

ತುಮಕೂರಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಆಚರಣೆ
ತುಮಕೂರು ನಗರದಲ್ಲಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ವಿಶ್ವ ಅಂತರಿಕ್ಷ ಸಪ್ತಾಹ ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಲ ಭವನದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಅಂತರಿಕ್ಷ ಸಪ್ತಾಹ ಕುರಿತು ಮಾಹಿತಿ ಅರಿತರು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ಸತತ ಪ್ರಯತ್ನ ಉದ್ದೇಶಿತ ಗುರಿ ಮುಟ್ಟಲು ಮತ್ತು ಯಶಸ್ಸು ಕಾಣಲು ಸಾಧ್ಯವೆಂದರು.

ಚಂದ್ರಯಾನ-2 ಉಡಾವಣೆ ಎಂದಿಗೂ ವಿಫಲವಾಗುವುದಿಲ್ಲ. ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ ಕಂಡು ಹಿಡಿಯುವಾಗ ಅನೇಕ ಬಾರಿ ಸೋತರೂ ಸತತ ಪರಿಶ್ರಮದಿಂದ ಕೊನೆಗೆ ಯಶಸ್ಸು ಕಂಡರು.

ಇಸ್ರೋ ಸಂಸ್ಥೆಯ ಎಸ್ಸಿಸಿಪಿ ಉಪ ನಿರ್ದೇಶಕ ಎಚ್.ಎಸ್. ವೆಂಕಟೇಶ್ ಸಾಮಾಜಿಕ ಕಲ್ಯಾಣಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಡುಗೆ ಅಪಾರ. ಚಂದ್ರಯಾನ-2 ಕೊನೆಯ ಹಂತದಲ್ಲಿ ಯಶಸ್ವಿ ಕಾಣಲಿಲ್ಲ. ಮುಂದೆ ಯಶಸ್ಸು ಸಾಧಿಸುತ್ತೇವೆ. ಮುಂದಿನ ವರ್ಷದಲ್ಲಿ ಆದಿತ್ಯ ಉಪಗ್ರಹ ಉಡಾವಣೆ ಮಾಡುವ ಆಶಯ ಹೊಂದಲಾಗಿದೆ. ಇದರಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಅವಕಾಶವಾಗುತ್ತದೆ ಎಂದರು.

ಡಿಡಿಪಿಐ ಎಂ.ಆರ್. ಕಾಮಾಕ್ಷಿ , ಇಸ್ರೋ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಟಿ.ಎಸ್. ಶಿವಪ್ರಸಾದ್, ಎಸ್ಸಿಸಿಪಿ ಉಪ ನಿರ್ದೇಶಕ ಆರ್. ನಾರಾಯಣ್ ಉಪಸ್ಥಿತರಿದ್ದರು.

Comment here