ಹೆತ್ತೇನಹಳ್ಳಿ ಮಂಜುನಾಥ
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮನೆ ಮನೆಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೋಮವಾರ (ಏ.20)ರಂದು ಹೊನ್ನುಡಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬರಲಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಗೌರಿಶಂಕರ್ ರವರು ಕ್ಷೇತ್ರದ 50000 ಕುಟುಂಬಗಳಿಗೆ ತಿಂಗಳಿಗಾಗುವ ಎಲ್ಲಾ ದಿನಸಿಯನ್ನು ನೀಡಲು ಮುಂದಾಗಿದ್ದಾರೆ. ಇದಕ್ಕೆ ಎಚ್.ಡಿ ದೇವೆಗೌಡರು ಚಾಲನೆ ನೀಡಲಿದ್ದಾರೆ.
ಅಕ್ಕಿ ಪ್ಯಾಕ್ ಮಾಡುತ್ತಿರುವ ಜೆಡಿಎಸ್ ಕಾರ್ಯಕರ್ತರು
ಕೊರೋನಾ ಶತಮಾನ ಕಂಡ ಅತ್ಯಂತ ಭೀಕರ ರೋಗ. ದೇಶದ ಆರ್ಥಿಕ ಕುಸಿತ, ಬರಗಾಲದ ಹಿನ್ನೆಲೆ, ಉದ್ಯೋಗದ ಕೊರತೆ ಜನರನ್ನ ಕಂಗಾಲಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಜವಬ್ದಾರಿಯುತ ನಾಗರಿಕನೂ ಕೂಡಾ ಮಾನವೀಯತೆ ಮೆರೆಯಬೇಕಾಗಿದೆ.
ಕರ್ನಾಟಕ ಲಾಕ್ ಡೌನ್ ಆದಾಗಿನಿಂದ ನನ್ನ ಕ್ಷೇತ್ರದ ಜನತೆ ಎಂತಹ ಪರಿಸ್ಥಿತಿ ಬಂದರೂ ಹಸಿವಿನಿಂದ, ಆರೋಗ್ಯದ ಸಮಸ್ಯೆಯಿಂದ ಬಳಲಬಾರದು. ಇದು ನನ್ನ ಜವಬ್ದಾರಿ ಮತ್ತು ಕರ್ತವ್ಯ ಎಂದು ಭಾವಿಸಿ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಗೌರಿಶಂಕರ್ ತಿಳಿಸಿದರು.
ಸಾಮಾಜಿಕ ಅಂತರ ಕಾಪಾಡಿ. ಅನಗತ್ಯವಾಗಿ ಜನರು ಮನೆಯಿಂದ ಹೊರಬರಬಾರದು. ಕರೊನಾ ತಡೆಗಟ್ಟಿ. ಇದು ಪಬ್ಲಿಕ್ ಸ್ಟೋರಿ ಕಾಳಜಿ
ಇಲ್ಲಿಯವರೆವಿಗೂ ರೈತರ ಬೆಳೆಗಳನ್ನ ಖರೀದಿಸಿ ಅಲ್ಲೇ ಹಂಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಮೊದಲ ದಿನದಿಂದಲೂ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಅನ್ನ ದಾಸೋಹವನ್ನು ಮಾಡಲಾಗುತ್ತಿದೆ. ಸೇವಾ ನಿರತ ಸರ್ಕಾರಿ ನೌಕರರಿಗೆ ಊಟ, ಮಾಸ್ಕ್, ಗ್ಲೌಸ್ ಮತ್ತು ಮತ್ತು ಸ್ಯಾನಿಟೈಸರ್ ನೀಡಲಾಗಿದೆ ಎಂದರು.
ಇನ್ನುಳಿದಂತೆ ನನ್ನ ಕ್ಷೇತ್ರದ ಜನಗಳಿಗೆ ಯಾವುದೇ ಸಮಸ್ಯೆ ಆಗದಂತೆ ದಿನಸಿ ಮತ್ತು ಮುಂಜಾಗೃತ ಕ್ರಮವಾಗಿ ಮಾಸ್ಕ್, ಹ್ಯಾಂಡ್ ವಾಷ್, ಮತ್ತು ಸ್ಯಾನಿಟೈಸರ್ ನೀಡಲಾಗಿದೆ ಎಂದು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.
Comment here