ಕವನ

ಕವನ ವಯಸ್ಸು

ಡಾ// ರಜನಿ .ಎಂ


ಕಣ್ಣಿಗೆ ಪೊರೆ
ಬಂದರೂ
ನಿನ್ನ ಚಿತ್ರ
ಅದೇ …ಒಂಚೂರೂ ಮಾಸಿಲ್ಲ.

ಬೇರೆಯದೆಲ್ಲ
ಮರೆತರೂ
ನಿನ್ನ ನೆನಪು
ಸದಾ ಹಸಿರು

ಕುಯ್ ಗುಡುವ
ಕೀಲುಗಳಿಗೂ
ನಿನ್ನದೆ
ರಾಗ

ಹೃದಯಸ್ತಂಭನದ
ವ್ಯತ್ಯಾಸ ವೇನು..
ಆ ದಿನವೆ ಹೃದಯ
ಅರೆಗಳಿಗೆ
ನಿಂತಿರಲಿಲ್ಲವೆ

ಸುಕ್ಕಾದ
ಚರ್ಮಕ್ಕೂ
ಅದೇ ಸ್ಪರ್ಶವಲ್ಲವೆ

ನಿನ್ನ ನೆನಪೆ
ಕ್ಯಾನ್ಸರ್ ಆಗಿದೆ
ಮೈ ಮನಗಳಲ್ಲಿ
ಹರಡುತ್ತಿದೆ

ಒಂದು ತುತ್ತು
ಅನ್ನಕ್ಕೆ ಸಾಕಾಗಿದೆ
ಊಟ
ಹಳೆ ಬುತ್ತಿಯ ಭಾರದಲ್ಲಿ

Comment here