ಕವನ

ಬುದ್ದನಾಗುವ ಆಸೆ

ಕಣ್ಣು


ಅರ್ಧ ಮುಚ್ಚಿದ
ಅಥವಾ
ಅರ್ಧ ತೆರೆದ?
ಹೊರಗೂ
ಒಳಗೂ
ದೃಷ್ಟಿ ನೆಟ್ಟು
ಎರಡನ್ನೂ ಬಿಟ್ಟು
ಅಂತರಾತ್ಮವ
ಬಗೆದು
ಒಳಗಣ್ಣು ತೆರೆದು
ಅರ್ಧ ನಿಮಿಲಿತ
ಕಣ್ಣುಗಳು
ತೆರೆಸಲಿ
ನಮ್ಮ ಕಣ್ಣು.

ಬುದ್ಧ


ಆಸೆ ಬಿಟ್ಟರೆ
ಬುದ್ಧ…
ಬುದ್ಧನಿಗೂ
ಬುದ್ಧನಾಗುವ ಆಸೆ.

ಎಲ್ಲಾ ಬಿಟ್ಟು


ಎಲ್ಲಾ ಬಿಟ್ಟು
ಬುದ್ಧನಾಗುವ
ಎಂದು
ಎಣಿಸಿ ದೊಡನೆ
ಕವಿತೆ ಬರೆಯುವ
ಆಸೆ.


ಅದೆಂತಹ

ಗುಂಗುರು ಕೂದಲು ?
ಸುತ್ತುವ
ಆಲೋಚನೆಗಳೆ?

ಉದ್ದಕಿವಿ…
ಕೇಳಿ ಕೇಳಿ
ದುಃಖ ದುಮ್ಮಾನಗಳನ್ನು…

ನಮ್ಮ ಎಲ್ಲ
ಮೂರ್ಖತನಗಳನ್ನು
ನೋಡಿಯೊ? ನಿನ್ನ ನಗು ..

ಯಾಕೆ ಹೀಗೆ
ಎಲ್ಲಿಗೆ
ಓಡುತ್ತಿದ್ದೀರಾ?

ಸ್ವಲ್ಪ ಕುಳ್ಳಿರಿ
ಕುಳಿತು
ಆಲೋಚಿಸಿ…

ಕೇಳಿಸಿಕೊಳ್ಳಿ
ಎಲ್ಲಾ
ಕೇಳಿಸಿಕೊಳ್ಳಿ…

ನಿಮ್ಮ
ಉತ್ತರ
ನಸುನಗುವಾಗಲಿ…

ನೋಡಿದರೂ
ನೋಡದಂತೆ
ಇರಿ ….

ಅಗೋ
ಜ್ಞಾನೋದಯವಾಗುವುದು..

ಆ ಬುದ್ಧ
ಹೇಳಿದ್ದು

ಎಷ್ಟು ಸತ್ಯ
ಎಂದು.

ಡಾ || ರಜನಿ

Comment here