ಜಸ್ಟ್ ನ್ಯೂಸ್

ಬಡಗಿ ಕಾರ್ಮಿಕರಿಗೆ ಪಡಿತರ ವಿತರಣೆ

ಪಾವಗಡದಲ್ಲಿ ಬುಧವಾರ ಬಡಗಿ ಕಾರ್ಮಿಕರ ಸಂಘದ ವತಿಯಿಂದ 150 ಬಡಗಿ ಕಾರ್ಮಿಕರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.

ಸಬ್ ಇನ್ ಸ್ಪೆಕ್ಟರ್ ನಾಗರಾಜು ವಿತರಣಾ ಕಾರ್ಯದಲ್ಲಿ ಭಾಗವಹಿಸಿ, ವಿತರಣೆಗಾಗಿ 150 ಮಂದಿಯನ್ನು ದೂರ ನಿಲ್ಲಿಸಿ ಅಚ್ಚುಕಟ್ಟಾಗಿ ಸಂಘ ವ್ಯವಸ್ಥೆ ಮಾಡಿದೆ.

ಸಂಕಷ್ಠದಲ್ಲಿರುವ ಬಡಗಿ ಕಾರ್ಮಿಕರು ಬಡ ಕುಟುಂಬಗಳನ್ನು ಗುರುತಿಸಿ ಷಾಮಿಲ್ ಮಾಲೀಕರು, ಗ್ಲಾಸ್, ಗ್ಲಾಸ್ ಅಂಡ್ ಫ್ಲೇವುಡ್ ಮಾಲೀಕರ ಸಹಕಾರದೊಂದಿಗೆ ಪಡಿತರ ವಿತರಿಸುತ್ತಿರುವ ಉತ್ತಮ ಕೆಲಸ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

Comment here