ಜಸ್ಟ್ ನ್ಯೂಸ್

ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದದ ಹೇಳಿಕೆಗೆ ಆಕ್ರೋಶ

ಮಧುಗಿರಿ – ಜಿಲ್ಲಾ ಕಾಂಗ್ರೆಸ್ ಗೆ ತಮ್ಮ ಕೊಡುಗೆ ಏನೆಂದು ತಿಳಿಸಿ ನಂತರ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್.ಭಾಸ್ಕರ್ ಕಾಂಗ್ರೆಸ್  ಅಧ್ಯಕ್ಷ ರಿಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು,   ಚುನಾವಣೆ ಸಮಯದಲ್ಲಿ  ಅಭ್ಯರ್ಥಿಗಳ ಗೆಲುವಿಗೆ  ತಮ್ಮ ಕೊಡುಗೆ ಏನು?   ನಿಮ್ಮ ಅಧಿಕಾರಾವಧಿಯಲ್ಲಿ ಪಕ್ಷದ ಬಲವರ್ದನೆಗೆ ಯಾವ ರೀತಿ ಯೋಜನೆಗಳನ್ನು ರೂಪಿಸಿದ್ದೀರಾ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಎಷ್ಟು ಭಾರಿ ಬಂದು ಪಕ್ಷ ಸಂಘಟನೆ ಮಾಡಿದ್ದೀರಾ ಎಂದು  ತಿಳಿಸಿ ನಂತರ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿಕೊಂಡು ಬಂದಿರುವ ಕೆ.ಎನ್.ರಾಜಣ್ಣ ಅವರು ಮೂಲ ಕಾಂಗ್ರೆಸ್ ಹಿನ್ನೆಲೆಯವರು . ಒಬ್ಬ ಜನಪರ ನಾಯಕನ ಮೇಲೆ ಮತ್ತೊಬ್ಬ ನಾಯಕನನ್ನು ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸಿ, ಆಗಲಾದರೂ ಜಿಲ್ಲೆಯಲ್ಲಿ  ಪಕ್ಷ   ಸುಭಧ್ರವಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಜನರ  ಕಷ್ಟ-ಸುಖಗಳಿಗೆ ಸ್ಪಂದಿಸಿಸುತ್ತಾ ಇಡೀ ಜಿಲ್ಲೆಯಲ್ಲಿ ಅವರದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅವರಿಗೆ ಅಧಿಕಾರವಿರಲಿ ಇಲ್ಲದಿರಲಿ ಜನರು ಸದಾ ಅವರೊಂದಿಗೆ ಇರುತ್ತಾರೆ. ಇದನ್ನು ಅರಿಯದೆ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನ ತೊರೆದರೆ ಅವರ ಸುತ್ತಾ ಇರುವೆ ಕೂಡ ಇರುವುದಿಲ್ಲ ಎಂಬ ನಿಮ್ಮ ಹೇಳಿಕೆ ಖಂಡನೀಯ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದಲೇ ನಾವೆಲ್ಲರೂ ಅವರ ಜೊತೆ ಪಕ್ಷದಲ್ಲಿದ್ದೇವೆ. ಒಂದು ವೇಳೆ ಅವರಿಗೆ ಇರುಸು-ಮುರುಸು ಉಂಟು ಮಾಡಿದಲ್ಲಿ ಅವರ ಜೊತೆಯಲ್ಲಿ  ನಾವೆಲ್ಲರೂ  ಪಕ್ಷವನ್ನು ತ್ಯೆಜಿಸುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Comment here