ಜಸ್ಟ್ ನ್ಯೂಸ್

ಆಧುನಿಕತೆಯ ಜೊತೆಗೆ ಸಂಸ್ಕೃತಿ ಮರೆಯಬಾರದು

ಪಾವಗಡ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಹೆಬ್ಬೂರು ಕೋದಂಡ ಆಶ್ರಮದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಜತ ಮಹೋತ್ಸವ ಸಂಕೀರ್ಣದ ಪೂಜೆ, ಹೋಮಾದಿ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಸಂಪಾದನೆ, ಆಧುನಿಕತೆಯ ಜೊತೆ ಜೊತೆಗೆ ಸಂಸ್ಕೃತಿಯನ್ನು ಮರೆಯಬಾರದು ಭಾರತ ದೇಶ ಸಂಸ್ಕೃತಿ, ಪರಂಪರೆಗಳಿಂದ ಜಗತ್ತಿನ ಗಮನ ಸೆಳೆದಿದೆ. ರಾಮಕೃಷ್ಣ ಪರಮಹಂಸರು, ವಿವೇಕಾನಂದರಂತಹ ಮಹಾನ್ ಸಾಧಕರನ್ನು ವಿಶ್ವ ನೆನಯುತ್ತದೆ ಎಂದರು. ಈ
ತಾಲ್ಲೂಕು ತೋಳಗಳಿಂದ ಹೆಸರು ಪಡೆದಿತ್ತು. ಸಧ್ಯ ಸ್ವಾಮಿ ಜಪಾನಂದಜೀ ರವರ ಆಧ್ಯಾತ್ಮಿಕ, ಆರೋಗ್ಯ, ಸಾಮಾಜಿಕ ಸೇವೆಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ರಾಮಕೃಷ್ಣ ವಿವೇಕಾನಂದ ವೇದಾಂತದ ಅನುಷ್ಠಾನ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸ್ವಾಮಿ ಜಪಾನಂದಜಿ, ನೂತನ ಆಸ್ಪತ್ರೆ ಸಂಕೀರ್ಣ ಲಕ್ಷಾಂತರ ಮಂದಿಗೆ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ. ವಿವಿಧ ಆರೋಗ್ಯ ಸಮಸ್ಯೆ ಹೊತ್ತು ವಿವಿಧ ಭಾಗಗಳಿಂದ ಬರುವ ಜನತೆಗೆ ದಶಕಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆಯೂ ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ ವಿಸ್ತರಿಸಲಾಗುವುದು ಎಂದರು.ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಕಾರದಿಂದ ದಕ್ಷಿಣ ಭಾರತದಲ್ಲಿಯೇ ಆಧುನಿಕ ಕಣ್ಣಿನ ಆಸ್ಪತ್ರೆ ಸಂಕೀರ್ಣದ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗಣ ಹೋಮ, ಸುದರ್ಶನ ಹೋಮ, ಧನ್ವಂತರಿ ಹೋಮ, ಶ್ರೀ ಚಕ್ರದ ಯಂತ್ರ ಆವಾಹನೆ, ಲಲಿತಾರ್ಚನೆ, ಪೂರ್ಣಾಹುತಿ ನಡೆಯಿತು.
ಪುರಸಭೆ ಸದಸ್ಯ ಸುದೇಶ್ ಬಾಬು, , ವೈದ್ಯ ಜಿ.ವೆಂಕಟರಾಮಯ್ಯ, ಇತಿಹಾಸ ಲೇಖಕ ಚೆಲುವರಾಜನ್, ಅನಂತರಾಮ ಭಟ್, ವಕೀಲ ಯಜ್ಞನಾರಾಯಣ ಶರ್ಮ, ಆನಂದರಾವ್, ಶ್ರೀ ಸುಬ್ಬುನರಸಿಂಹ, ಲೋಕೇಶ್ ದೇವರಾಜ್, ರಾಮನಾಥ ಶೆಟ್ಟಿ, ರಾಮಮೂರ್ತಿ, ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು

Comment here