Public story
ತುಮಕೂರು: ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಕೋವಿಡ್-19 ಲಾಕ್ ಡೌನ್ ಪರಿಹಾರ ಹಣ ನೀಡಲು ಅರ್ಹ ಚರ್ಮಕುಶಲ ಕರ್ಮಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಪಾದರಕ್ಷೆ ತಯಾರಿಕೆ, ದುರಸ್ತಿ ಹಾಗೂ ಚರ್ಮ ಹದ ಮಾಡುವ ಕಾರ್ಯದಲ್ಲಿ ತೊಡಗಿರುವ ಚಮ್ಮಾರರು, ಚರ್ಮಕುಶಲ ಕರ್ಮಿಗಳಿಗೆ 2000 ರೂ.ಗಳ ಪರಿಹಾರ ನೀಡಲಾಗುವುದು. ಆಸಕ್ತ ಚರ್ಮಕುಶಲ ಕರ್ಮಿಗಳು ಜೂನ್ 30ರೊಳಗಾಗಿ ಸೇವಾಸಿಂಧು sevasindhu.karnataka.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಹಾರದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9480886278ನ್ನು ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
Comment here