Tuesday, April 16, 2024
Google search engine
Homeಜಸ್ಟ್ ನ್ಯೂಸ್IAS ಅಧಿಕಾರಿ ಮಣಿವಣ್ಣನ್ ವರ್ಗಾವಣೆಗೆ ಹೆಚ್ಚಿದ‌ ವಿರೋಧ

IAS ಅಧಿಕಾರಿ ಮಣಿವಣ್ಣನ್ ವರ್ಗಾವಣೆಗೆ ಹೆಚ್ಚಿದ‌ ವಿರೋಧ

Publicstory.in


Bengaluru: ಕೋವಿಡ್ ಪರಿಹಾರ ಕಾಯ೯ಗಳ ನಡುವೆ ಕಾಮಿ೯ಕ ಕಾಯ೯ದಶಿ೯ ಮಣಿವಣ್ಣನ್ ವಗಾ೯ವಣೆ ಸಿಪಿಐ(ಎಂ) ಖಂಡಿಸಿದೆ.

ಕೋವಿಡ್ ಪರಿಹಾರ ಕಾಯ೯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾಯ೯ನಿವ೯ಹಿಸಿದ್ದ ಕಾಮಿ೯ಕ ಇಲಾಖೆಯ ಪ್ರಧಾನ ಕಾಯದಶಿ೯ಗಳಾದ ಮಣಿವಣ್ಣನ್ ಅವರನ್ನು ರಾಜ್ಯ ಸಕಾ೯ರವು ವಗಾ೯ವಣೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ತನ್ನ ಕೈಂಕಯ೯ಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಕಾಮಿ೯ಕ ಇಲಾಖೆಯ ಪ್ರಧಾನ ಕಾಯ೯ದಶಿ೯ ಹೊಣೆಯನ್ನು ವಹಿಸಿದೆ ಎಂಬ ಗಂಭೀರ ಆರೋಪ ಮಾಡಿದೆ.

ರಾಜ್ಯದ ಕಾಮಿ೯ಕರ ಹಿತಕ್ಕಿಂತ ಕಾಪೋ೯ರೇಟ್ ಬಂಡವಾಳದ ಹಿತವೇ ರಾಜ್ಯ ಸಕಾ೯ರಕ್ಕೆ ಮುಖ್ಯ ವಾಗಿದೆ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.
ಏನಾದರು ಮಾಡಿ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೋವಿಡ್ ಪರಿಹಾರವನ್ನು ಸಹಾ ಬಲಿಕೊಡಲು ರಾಜ್ಯ ಸಕಾ೯ರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ ಎಂದು ಹೇಳಿದೆ.

ತನ್ನ ಬಂಡವಾಳಗಾರರ ಪರ ನೀಲುಮೆಯ ಸಾಧನೆಗಾಗಿ ಒಬ್ಬ ದಕ್ಷ ಮತ್ತು ಕೋವಿಡ್ ಪರಿಹಾರ ಕಾಯ೯ವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಸಹ ಸಹಿಸದು ಬಿಜೆಪಿ ಸರಕಾರ ಎಂದು ಸಿಪಿಐ(ಎಂ) ಖಂಡಿಸಿದೆ.

ರಾಜ್ಯ ಬಿಜೆಪಿ ಸಕಾ೯ರದ ಇಂತಹ ಕ್ರಮಗಳೆ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜನತೆಗೆ ಪರಿಹಾರವನ್ನು ಸಮ೯ಪಕವಾಗಿ ಸಮಥ೯ವಾಗಿ ನಿವ೯ಹಿಸುವಲ್ಲಿ ವಿಫಲವಾಗುತ್ತಿದೆ. ರಾಜ್ಯ ಸಕಾ೯ರದಲ್ಲಿನ ದ್ವಿಅಧಿಕಾರ ಕೇಂದ್ರಗಳು ಹಾಗು ಸೂಪರ್ ಸಿಎಂ ಸಂತೋಷ್ ಕಪಿಮುಷ್ಟಿಯಲ್ಲಿ ರಾಜ್ಯ ಸಕಾ೯ರವು ಸಿಲುಕಿರುವ ಪರಿಣಾಮ ಇಂತಹ ದೂರದೃಷ್ಟಿ ಹೀನ ಆಡಳಿತಾತ್ಮಕ ಕ್ರಮಗಳನ್ನು ರಾಜ್ಯದ ಜನತೆ ಕಣುವಂತಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೋವಿಡ್ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಮಣಿವಣ್ಣನ್ ವಗಾ೯ವಣೆಯನ್ನು ಕೂಡಲೆ ರದ್ದುಪಡಿಸಿ ಕಾಮಿ೯ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯಾಗಿ ಅವರನ್ನೇ ಮುಂದುವರಿಸ ಬೇಕೆಂದು ಸಿಪಿಐ (ಎಂ) ರಾಜ್ಯ ಸಕಾ೯ರವನ್ನು ಒತ್ತಾಯಿಸಿದೆ ಎಂದು ಸಿಪಿಐ (ಎಂ)
ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್, ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ತಿಳಿಸಿದ್ದಾರೆ.

RELATED ARTICLES

1 COMMENT

  1. ಕೋಮುವಾದಿ ಬಿಜೆಪಿ ಸರ್ಕಾರದಲ್ಲಿ ದಲಿತ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂದಿನಿಂದ ಬಂದಂತಹ ಗುಲಾಮಗಿರಿ ಪದ್ಧತಿಯನ್ನು ಮತ್ತೆ ಮತ್ತೆ ನಿರ್ದಯವಾಗಿ, ನಿರ್ಧಾಕ್ಷಿಣ್ಯವಾಗಿ, ತಮ್ಮ ಜಾತಿ ಕ್ರೌರ್ಯವನ್ನು ಪ್ರದರ್ಶಿಸುವ ವ್ಯವಸ್ಥಿತ ಹುನ್ನಾರವೇ ಬಿಜೆಪಿ ಸರ್ಕಾರ. ಬಿಜೆಪಿ ಸರ್ಕಾರಕ್ಕೆ ದಲಿತರ ಪರವಾಗಿ ಮಾತನಾಡುವ ನೈತಿಕತೆ ಇಲ್ಲಾ. ಈ ಮುಂಚೆ ಗುಬ್ಬಿ ತಹಸಿಲ್ದಾರ್ ಶ್ರೀಮತಿ ಮಮತಾ ಮೇಡಂ ಅದಾದನಂತರ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀಮತಿ ಚಂದ್ರಿಕಾ ರವರನ್ನು ಕೂಡ ಇದೇ ಜಾತಿ ಕ್ರೌರ್ಯಕ್ಕೆ ಬಲಿಯಾದಂಥವರು. ಇದಕ್ಕೆಲ್ಲಾ ಬೇರಾರು ಕಾರಣ ಅಲ್ಲ ಬಿಜೆಪಿ ಮುಖಂಡರುಗಳ ಜಾತಿವಾದಿ ಮನಸ್ಥಿತಿ. ಅಸ್ಪೃಶ್ಯತೆ ಇಲ್ಲಾ, ಜಾತಿಯತೆ ಇಲ್ಲಾ, ಅನ್ನುವ ಮಾನಗೇಡಿ ಲಜ್ಜೆಗೆಟ್ಟ ಮನಸ್ಥಿತಿಗಳು ಒಮ್ಮೆ ಈ ಕಡೆ ಗಮನಹರಿಸಿ ಇಂತಹ ಪ್ರಾಮಾಣಿಕ ಅಧಿಕಾರಿಗಳು ವರ್ಗಾವಣೆ ಅಮಾನತ್ತು ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದು ದಲಿತ ಸಮುದಾಯದಲ್ಲಿ ಹುಟ್ಟಿದ ಎಂಬ ಒಂದೇ ಕಾರಣಕ್ಕೆ. ಇಂಥ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಮಾನವಕುಲ ಹೇಳಬೇಕಾಗಿದೆ ಧಿಕ್ಕಾರವನ್ನಾ…

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?